ಕರ್ನಾಟಕ

karnataka

ETV Bharat / state

ಖಾತೆ ಹಂಚಿಕೆ ಬಗ್ಗೆ ನನಗೇ ಇನ್ನೂ ಮಾಹಿತಿ ಬಂದಿಲ್ಲ: ಸಚಿವ ಮುನೇನಕೊಪ್ಪ - ಸಚಿವ ಶಂಕರ ಪಾಟೀಲ ಮುನೇನಕೊಪ್ಪ

ಖಾತೆ ಹಂಚಿಕೆ ಬಗ್ಗೆ ನನಗೇ ಇನ್ನೂ ಮಾಹಿತಿ ಬಂದಿಲ್ಲ, ದೊಡ್ಡ ಖಾತೆ ಸಣ್ಣ ಖಾತೆ ಎನ್ನುವುದಕ್ಕಿಂತ ಧಾರವಾಡ ಜನತೆಗೆ ನ್ಯಾಯ ಒದಗಿಸಬೇಕು ಅಷ್ಟೇ ಎಂದು ಸಚಿವ ಶಂಕರ ಪಾಟೀಲ್​ ಮುನೇನಕೊಪ್ಪ ಹೇಳಿದ್ದಾರೆ.

portfolio
ಸಚಿವ ಮುನೇನಕೊಪ್ಪ ಪ್ರತಿಕ್ರಿಯೆ

By

Published : Aug 7, 2021, 5:02 PM IST

ಧಾರವಾಡ:ಖಾತೆ ಹಂಚಿಕೆ ಬಗ್ಗೆ ನನಗೇ ಇನ್ನೂ ಮಾಹಿತಿ ಬಂದಿಲ್ಲ ಎಂದು ಸಕ್ಕರೆ ಸಚಿವ ಶಂಕರ ಪಾಟೀಲ್​ ಮುನೇನಕೊಪ್ಪ ಹೇಳಿದರು. ಮೊದಲ ಬಾರಿ ಧಾರವಾಡಕ್ಕೆ ಆಗಮಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಧ್ಯಮದವರಿಂದ ನನಗೆ ಗೊತ್ತಾಗಿದೆ. ಯಾವ ಖಾತೆ ಎನ್ನುವುದು ಮುಖ್ಯವಲ್ಲ ಜನರಿಗೆ ಅನುಕೂಲ ಆಗುವುದು ಮುಖ್ಯ ಎಂದರು.

ಸಚಿವ ಮುನೇನಕೊಪ್ಪ ಪ್ರತಿಕ್ರಿಯೆ

ದೊಡ್ಡ ಖಾತೆ ಸಣ್ಣ ಖಾತೆ ಎನ್ನುವುದಕ್ಕಿಂತ ಧಾರವಾಡ ಜನತೆಗೆ ನ್ಯಾಯ ಒದಗಿಸಬೇಕು ಎಂದರು. ನನ್ನ ಜೀವನದಲ್ಲಿ ಯಾವತ್ತೂ ಕೂಡ ಏನು ಬಯಸಿಲ್ಲ ಎಂದರು. ನಾನು ಸಾಮಾನ್ಯ ಕುಟುಂಬದವನು, ಇವತ್ತು ಕೂಡ ಗ್ರಾಮಾಂತರ ಜಿಲ್ಲೆಗೆ ಸಚಿವ ಸ್ಥಾನ ಬಂದಿದೆ. ಮುಂದಿನ ದಿನಗಳಲ್ಲಿ ಖಾತೆ ಬದಲಾವಣೆ ಆಗಬಹುದು. ನಾಳೆ ನಾಡಿದ್ದು, ನಾನೇ ಖಾತೆ ತಿಳಿದುಕೊಂಡು ಮಾತಾಡುತ್ತೇನೆ. ಮಂತ್ರಿ ಸ್ಥಾನ ಸಿಗಲು ಮಾಧ್ಯಮದವರ ಸಹಕಾರ ಕೂಡ ಬಹಳಷ್ಟಿದೆ ಎಂದರು.

ಕಾರ್ಯಕರ್ತರ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಚಿವ ಶಂಕರ ಪಾಟೀಲ:

ನೂತನ ಸಚಿವರಾದ ಮೇಲೆ ಮೊದಲ ಬಾರಿಗೆ ಜಿಲ್ಲೆಗೆ ಮುನೇನಕೊಪ್ಪ ಭೇಟಿ ಹಿನ್ನೆಲೆ ಸಚಿವರಿಗೆ ಅದ್ಧೂರಿಯಾಗಿ ಸ್ವಾಗತ ಕೋರಿ ಬರಮಾಡಿಕೊಂಡಿದ್ದ ಅಭಿಮಾನಿಗಳ ನಡೆಗೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿಕೆ

ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಅದ್ದೂರಿ ಸ್ವಾಗತ ಹಿನ್ನೆಲೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನಾನು ಮೊದಲ ಬಾರಿಗೆ ಭೇಟಿ ನೀಡಿದ ಹಿನ್ನೆಲೆ ಈ ರೀತಿಯಾಗಿ ಆಗಿದೆ. ಅಭಿಮಾನಿಗಳಿಗೆ ನಾನು ಹೇಳಿದ್ದೆ ಆದರೂ ಹೆಚ್ಚಿನ ಜನ ಸೇರಿದ್ದರು. ತೆರೆದ ವಾಹನದಲ್ಲಿ ಏರಲು ಪೊಲೀಸರೇ ಹೇಳಿದ್ದರು. ಕೆಲಕಾಲ ಅಭಿಮಾನಿಗಳ ಸಲುವಾಗಿ ಏರಿದ್ದೆ ಅಷ್ಟೇ ಎಂದರು. ಧಾರವಾಡಕ್ಕೆ ಹೋಗಿ ಕೋವಿಡ್ ನಿಯಂತ್ರಣದ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ ಎಂದು ಅವರು ಹೇಳಿದರು.

ಜಿಲ್ಲಾಧ್ಯಕ್ಷ ಅರವಿಂದ್ ಬೆಲ್ಲದ ಸ್ವಾಗತಕ್ಕಾಗಿ ಆಗಮಿಸದ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಅವರು, ನಾನು ಅವರು ಇಬ್ಬರು ಆತ್ಮೀಯ ಸ್ನೇಹಿತರು. ಅವರಿಗೆ ಯಾವುದೇ ಅಸಮಾಧಾನ ಇಲ್ಲ. ನನಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಅವರನ್ನು ಸಹ ಭೇಟಿ ಆಗಿ ಮಾತನಾಡುತ್ತೇನೆ ಎಂದು ನೂತನ ಸಚಿವ ಶಂಕರ ಪಾಟೀಲ್​ ಮುನೇನಕೊಪ್ಪ ಹೇಳಿದರು.

ABOUT THE AUTHOR

...view details