ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ : ಸ್ವಾವಲಂಬಿ ಮಾರಾಟ ಮಳಿಗೆಗೆ ಸಚಿವ ಜಗದೀಶ್ ಶೆಟ್ಟರ್ ಚಾಲನೆ - ಜಗದೀಶ್​ ಶೆಟ್ಟರ್ ಲೆಟೆಸ್ಟ್​ ನ್ಯೂಸ್​

ಸ್ವಾವಲಂಬಿ ಜೀವನ ನಡೆಸುವುದಕ್ಕೆ ಯುವಕರು ಮುಂದೆ ಬರಬೇಕು. ಸರ್ಕಾರ ಎಲ್ಲಾ ರೀತಿ ಸಹಾಯ ಮಾಡುವುದು. ಈ ದಿಸೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವದೇಶಿ ಉತ್ಪನ್ನ, ಸ್ಥಳೀಯ ಉತ್ಪನ್ನಕ್ಕೆ ಆದ್ಯತೆ ನೀಡಬೇಕೆಂದು ಮನವಿ ಮಾಡಿದ್ದಾರೆ..

Minister Jagdish Shettar
ಸ್ವಾವಲಂಬಿ ಮಾರಾಟ ಮಳಿಗೆಗೆ ಸಚಿವ ಜಗದೀಶ್ ಶೆಟ್ಟರ್ ಚಾಲನೆ

By

Published : Jun 28, 2020, 2:48 PM IST

ಹುಬ್ಬಳ್ಳಿ: ಸ್ವಯಂ ಉದ್ಯೋಗ ಯೋಜನೆಯಡಿ ಬಾಬು ಜಗಜೀವನ್ ರಾಮ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಅಡಿ ನಿರ್ಮಿಸಲಾದ ಸ್ವಾವಲಂಬಿ ಮಾರಾಟ ಮಳಿಗೆಗೆ ಸಚಿವ ಜಗದೀಶ್ ಶೆಟ್ಟರ್ ಚಾಲನೆ ನೀಡಿದರು.

ಸ್ವಾವಲಂಬಿ ಮಾರಾಟ ಮಳಿಗೆಗೆ ಸಚಿವ ಜಗದೀಶ್ ಶೆಟ್ಟರ್ ಚಾಲನೆ

ನಗರದ ಟೌನ್‌ಹಾಲ್ ಎದುರಿನಲ್ಲಿ ಶಂಕರ ರಾಮದಾಸ್ ಕಾಮಟೆ ಅವರು ಲಿಡ್ಕರ್ ಅಡಿ ₹10 ಲಕ್ಷ ಅನುದಾನ ಪಡೆದು ಮಳಿಗೆ ನಿರ್ಮಿಸಿಕೊಂಡಿದ್ದರು. ಈ ಮಳಿಗೆ ಉದ್ಘಾಟಿಸಿ ಮಾತನಾಡಿದ ಸಚಿವರು, ಸ್ವಾವಲಂಬಿ ಜೀವನ ನಡೆಸುವುದಕ್ಕೆ ಯುವಕರು ಮುಂದೆ ಬರಬೇಕು. ಸರ್ಕಾರ ಎಲ್ಲಾ ರೀತಿ ಸಹಾಯ ಮಾಡುವುದು. ಈ ದಿಸೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವದೇಶಿ ಉತ್ಪನ್ನ, ಸ್ಥಳೀಯ ಉತ್ಪನ್ನಕ್ಕೆ ಆದ್ಯತೆ ನೀಡಬೇಕೆಂದು ಮನವಿ ಮಾಡಿದ್ದಾರೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.

ಈ ಸಂದರ್ಭ ‌ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ನಾಗೇಶ್ ಕಲಬರ್ಗಿ, ಎಸ್. ರುದ್ರೇಶ್ ಸೇರಿ ಇತರ ಮುಖಂಡರು ಹಾಜರಿದ್ದರು.

ABOUT THE AUTHOR

...view details