ಕರ್ನಾಟಕ

karnataka

ETV Bharat / state

ಯೋಗಾಭ್ಯಾಸ ಮಾಡಿ ಯೋಗ ದಿನದ ಶುಭಾಶಯ ತಿಳಿಸಿದ ಸಚಿವ ಶೆಟ್ಟರ್ - Hubli yoga day celebration news

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಸಚಿವ ಜಗದೀಶ್ ಶೆಟ್ಟರ್ ತಮ್ಮ ನಿವಾಸದಲ್ಲಿಯೇ ಯೋಗಾಭ್ಯಾಸ ನಡೆಸಿ, ನಾಡಿದ ಜನತೆಗೆ ಯೋಗ ದಿನದ ಶುಭಾಶಯ ತಿಳಿಸಿದರು.

Jagadish shetter
Jagadish shetter

By

Published : Jun 21, 2020, 12:32 PM IST

ಹುಬ್ಬಳ್ಳಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಸಚಿವ ಜಗದೀಶ್ ಶೆಟ್ಟರ್ ತಮ್ಮ ನಿವಾಸದಲ್ಲಿಯೇ ಯೋಗಾಭ್ಯಾಸ ನಡೆಸಿ, ನಾಡಿದ ಜನತೆಗೆ ಯೋಗ ದಿನದ ಶುಭಾಶಯ ತಿಳಿಸಿದರು.

ಕೊರೊನಾ ಸೋಂಕು ಹರಡುತ್ತಿರುವ ಕಾರಣ ಸಾಮಾಜಿಕ ಅಂತರದ ಜೊತೆಗೆ ಆರೋಗ್ಯದ ದೃಷ್ಟಿಯಿಂದ ತಮ್ಮ ಮನೆಯಲ್ಲಿಯೇ ಯೋಗಾಭ್ಯಾಸ, ವಿವಿಧ ಮುದ್ರೆಗಳನ್ನು ಮಾಡುವ ಮೂಲಕ ವಿಶ್ವ ಯೋಗ ದಿನಾಚರಣೆಯನ್ನು ಸಚಿವರು ಆಚರಣೆ ಮಾಡಿದರು.

ಇನ್ನು ಭಾರತೀಯ ಮೂಲ ಪರಂಪರೆ ಪ್ರಕಾರ ಯೋಗಾಭ್ಯಾಸವು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢವಾಗಿರಲು ಹೆಚ್ಚು ಸಹಕಾರಿಯಾಗಿದೆ. ಆರೋಗ್ಯಯುತ ಜೀವನಕ್ಕಾಗಿ ಎಲ್ಲರೂ ಯೋಗಾಭ್ಯಾಸ ರೂಢಿಸಿಕೊಳ್ಳಿ ಎಂದು ಶೆಟ್ಟರ್ ಕರೆ ನೀಡಿದರು.

ABOUT THE AUTHOR

...view details