ಹುಬ್ಬಳ್ಳಿ :ನಾವು ಕುಡಿಯೋದಕ್ಕೆ ನೀರು ಕೇಳ್ತಾ ಇದೀವಿ, ಹೊರತು ಕೃಷಿಗಾಗಿ ಅಲ್ಲ. ಮೇಕೆದಾಟು ಯೋಜನೆಯಲ್ಲಿ ತಮಿಳುನಾಡು ಸರ್ಕಾರ ವಿನಾಕಾರಣ ಅಡ್ಡಿ ಪಡಿಸುತ್ತಿದೆ ಎಂದು ರಾಜ್ಯದ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆಯಲ್ಲಿ ನಾವು ಹೆಚ್ಚಿನ ನೀರನ್ನು ತೆಗೆದುಕೊಳ್ಳುತ್ತಿಲ್ಲ. ಕುಡಿಯುವ ನೀರಿಗಾಗಿ ಸುಪ್ರೀಂಕೋರ್ಟ್ ಈಗಾಗಲೇ ಆದೇಶ ನೀಡಿದೆ. ನಾವು ನೀರು ಕೇಳುತ್ತಿರುವುದು ಕುಡಿಯುವುದಕ್ಕಾಗಿ ಹೊರತು, ಕೃಷಿಗಾಗಿ ಅಲ್ಲ. ಆದರೆ ತಮಿಳುನಾಡು ವಿನಾಕಾರಣ ಇದಕ್ಕೆ ಅಡ್ಡಿ ಪಡಿಸ್ತಿದೆ ಎಂದರು.
ಈಗಾಗಲೇ ತಮಿಳುನಾಡಿನವರು ಪಿಐಎಲ್ ಹಾಕಿದ್ದಾರೆ. ನಾವು ಕೂಡ ಹಾಕಿದೀವಿ.ಇದನ್ನ ಕೂಡಲೇ ಇತ್ಯರ್ಥ ಪಡಿಸಲಿಕ್ಕೆ ಸುಪ್ರೀಂಕೋರ್ಟ್ನಲ್ಲಿ ನಾವು ಕಾನೂನು ಪ್ರಕಾರ ಹೋರಾಟ ಮಾಡ್ತೀವಿ ಎಂದರು.