ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಅವರದ್ದು ಡಬಲ್ ಸ್ಟಾಂಡರ್ಡ್ ನಿಲುವು: ಸಚಿವ ಕೆ.ಎಸ್.ಈಶ್ವರಪ್ಪ ತರಾಟೆ - Minister Eshwarappa statement about by election news

ಸಿದ್ದರಾಮಯ್ಯ ಅವರದ್ದು ಡಬಲ್ ಸ್ಟಾಂಡರ್ಡ್ ನಿಲುವು. ಮೊದಲು ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದರು. ಎರಡೆರಡು ಕಡೆಗಳಲ್ಲಿ ನಿಂತರು. ಮತ್ತೆ ಬದಾಮಿಯಲ್ಲಿ ನಿಲ್ಲುವುದಾಗಿ ಹೇಳಿದ್ದಾರೆ. ಮುಂದಿನ ಬಾರಿ ನೂರಕ್ಕೆ ನೂರು ಅವರು ನಿಲ್ಲಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕುಟುಕಿದರು.

ಸಚಿವ ಕೆ.ಎಸ್.ಈಶ್ವರಪ್ಪ
ಸಚಿವ ಕೆ.ಎಸ್.ಈಶ್ವರಪ್ಪ

By

Published : Mar 30, 2021, 10:50 AM IST

ಹುಬ್ಬಳ್ಳಿ:ರಮೇಶ್ ಜಾರಕಿಹೊಳಿ ಸಿಡಿ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಸಿಡಿ ವಿಚಾರ ಬಿಟ್ಟು ಬೇರೆ ಏನಾದರೂ ಕೇಳಿ ಉತ್ತರ ಕೊಡುವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಸಚಿವ ಕೆ.ಎಸ್.ಈಶ್ವರಪ್ಪ

‌ನಗರಲ್ಲಿಂದು ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ನಮ್ಮ ಸಂಘಟನೆ ನೋಡಿ ಕಾಂಗ್ರೆಸ್, ಜೆಡಿಎಸ್​ಗೆ ದಿಕ್ಕು ತೋಚುತ್ತಿಲ್ಲ. ಹಿಂದಿನ ಎಲ್ಲ ಉಪ ಚುನಾವಣೆಗಳಲ್ಲಿ ನಾವೇ ಗೆದ್ದಿದ್ದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನ ಪೂರ್ಣ ಬಹುಮತ ನೀಡಿದರೆ ಗೊಂದಲ ಆಗುತ್ತಿರಲಿಲ್ಲ. ಜನ ನಮಗೆ 104 ಸ್ಥಾನ ನೀಡಿದರು, ಅದಕ್ಕೆ ಈ ಎಲ್ಲ ಗೊಂದಲಗಳಿಗೆ ಕಾರಣವಾಗಿದೆ ಎಂದರು.

ಇದನ್ನೂ ಓದಿ:ನಾಮಪತ್ರ ಸಲ್ಲಿಕೆಗೂ ಮುನ್ನ ಅಂಗಡಿ ಕುಟುಂಬದಿಂದ ಟೆಂಪಲ್ ರನ್

ಸಿದ್ದರಾಮಯ್ಯ ಅವರದ್ದು ಡಬಲ್ ಸ್ಟಾಂಡರ್ಡ್ ನಿಲುವು. ಮೊದಲು ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದರು. ಎರಡೆರಡು ಕಡೆಗಳಲ್ಲಿ ನಿಂತರು. ಮತ್ತೆ ಬಾದಾಮಿಯಲ್ಲಿ ನಿಲ್ಲುವುದಾಗಿ ಹೇಳಿದ್ದಾರೆ. ಮುಂದಿನ ಬಾರಿ ನೂರಕ್ಕೆ ನೂರು ಅವರು ನಿಲ್ಲಲ್ಲ. ಸಿದ್ದರಾಮಯ್ಯಗೆ ಸೋಲಿನ ಭೀತಿ ಎದುರಾಗಿದೆ ಎಂದು ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ABOUT THE AUTHOR

...view details