ಕರ್ನಾಟಕ

karnataka

ETV Bharat / state

ಅಪ್ಪನಿಂದ ಆಗದ ಕೆಲಸ ಮಗನಿಂದ ಸಾಧ್ಯವಿಲ್ಲ: 'ಉದ್ಧ'ಟನಕ್ಕೆ ಸಚಿವ ಸುಧಾಕರ್ ಟಾಂಗ್ - minister dr k sudhakar latest visits to hubli

ಸಿಎಂ ಉದ್ಧವ್​ ಠಾಕ್ರೆ ಜನಪ್ರಿಯತೆ ಕುಗ್ಗುತ್ತಿದೆ. ಹೀಗಾಗಿ ರಾಜಕೀಯವಾಗಿ ಬೆಳೆಯಲು ಗಡಿ ತಂಟೆ ತೆಗೆಯುತ್ತಿದ್ದಾರೆ ಎಂದು ಸಚಿವ ಕೆ. ಸುಧಾಕರ್​ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ವಿರುದ್ಧ ಟೀಕಾ ಸಮರ ನಡೆಸಿದರು.

minister dr k sudhakar attacks maharashtra cm uddhav thackeray
ಉದ್ದವ್ ಠಾಕ್ರೆ ವಿರುದ್ಧ ವಾಗ್ದಾಳಿ

By

Published : Jan 19, 2021, 7:35 PM IST

ಹುಬ್ಬಳ್ಳಿ:ಬೆಳಗಾವಿಯನ್ನು ಅವರ ಅಪ್ಪನಿಂದಲೇ ಪಡೆಯಲು ಆಗಿಲ್ಲ, ಇನ್ನು ಅವರ ಮಗನಿಂದ ಪಡೆಯಲು ಸಾಧ್ಯವೇ? ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್​ ಉದ್ದವ್ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದರು.

ಉದ್ದವ್ ಠಾಕ್ರೆ ವಿರುದ್ಧ ವಾಗ್ದಾಳಿ
ನಗರದಲ್ಲಿಂದು ಮಾತನಾಡಿದ ಅವರು, ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ಜನಪ್ರಿಯತೆ ಕುಗ್ಗುತ್ತಿದೆ. ಹೀಗಾಗಿ ರಾಜಕೀಯವಾಗಿ ಬೆಳೆಯಲು ಗಡಿ ತಂಟೆ ತೆಗೆಯುತ್ತಿದ್ದಾರೆ. ಅವರಂತೆ ನಾವೇನು ಸಾಂಗ್ಲಿ, ನಾಗಪುರ ಪಡೆಯುತ್ತೇವೆ ಎನ್ನಲ್ಲ. ನಾವು ಕಾನೂನುಬದ್ಧವಾಗಿಯೇ ನಡೆದುಕೊಳ್ಳುವವರು. ಮಹಾಜನ ವರದಿ ಅಂತಿಮ. ಇದನ್ನು ಎಲ್ಲರೂ‌‌ ಒಪ್ಪಿಕೊಳ್ಳಬೇಕು. ಇದನ್ನು ಬಿಟ್ಟು ಅವರಂತೆ ಬೇಕಾಬಿಟ್ಟಿ ಮಾತಾಡಲ್ಲ ಎಂದರು.

ABOUT THE AUTHOR

...view details