ಕರ್ನಾಟಕ

karnataka

ETV Bharat / state

ಕಿಮ್ಸ್‌ನಲ್ಲಿ ಪಾಪುಗೆ ಚಿಕಿತ್ಸೆ: ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಬಿ.ಸಿ.ಪಾಟೀಲ್‌, ಖಂಡ್ರೆ - ಕಿಮ್ಸ್​ಗೆ ಭೇಟಿ ನೀಡಿದ ಸಚಿವ ಬಿ.ಸಿ.ಪಾಟೀಲ್

ಕಿಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಪತ್ರಕರ್ತ, ನಾಡೋಜ ಪಾಟೀಲ​ ಪುಟ್ಟಪ್ಪ ಅವರನ್ನು ಕೃಷಿ ಸಚಿವ ಬಿ.ಸಿ.ಪಾಟೀಲ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

minister B.C.patil and Khandre visit to kims hospital for papu
ಕಿಮ್ಸ್​ಗೆ ಭೇಟಿ ನೀಡಿದ ಬಿ.ಸಿ.ಪಾಟೀಲ್

By

Published : Mar 1, 2020, 3:25 PM IST

ಹುಬ್ಬಳ್ಳಿ:ಕಿಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಪತ್ರಕರ್ತ, ನಾಡೋಜ ಪುರಸ್ಕೃತ ಪಾಟೀಲ​ ಪುಟ್ಟಪ್ಪ ಅವರನ್ನು ಕೃಷಿ ಸಚಿವ ಬಿ.ಸಿ.ಪಾಟೀಲ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಕಿಮ್ಸ್​ಗೆ ಭೇಟಿ ನೀಡಿದ ಬಿ.ಸಿ.ಪಾಟೀಲ್

ಬಹುಅಂಗ ವೈಫಲ್ಯದಿಂದ ಬಳಲುತ್ತಿರುವ ಪಾಪು ಆರೋಗ್ಯ ಕಳೆದ ಕೆಲವು ದಿನಗಳಿಂದ ಹದಗೆಟ್ಟಿತ್ತು. ಹಾಗಾಗಿ ಅವರು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು ಸದ್ಯ ನಿಧಾನವಾಗಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಬಿ.ಸಿ.ಪಾಟೀಲ್ ಅವರು ಪಾಪು ಅವರನ್ನು ಮಾತನಾಡಲು ಯತ್ನಿಸಿದಾಗ ಕೈ ಅಲುಗಾಡಿಸಿ ಹಸ್ತಲಾಘವ ಮಾಡಲು ಮುಂದಾಗಿದ್ದಾರೆ. ಇನ್ನು, ಇದೇ ವೇಳೆ ನೀವು ಗುಣಮುಖರಾಗಲು ನಾವೆಲ್ಲ ಪ್ರಾರ್ಥಿಸುತ್ತಿದ್ದೇವೆ. ಧೈರ್ಯದಿಂದಿರಿ ಎಂದು ಈಶ್ವರ ಖಂಡ್ರೆ ಧೈರ್ಯ ತುಂಬಿದರು.

ABOUT THE AUTHOR

...view details