ಕರ್ನಾಟಕ

karnataka

ETV Bharat / state

ಮಧ್ಯಂತರ ಪರಿಹಾರಧವನ್ನ ಕನಿಷ್ಟ 5000ಕ್ಕೆ ಏರಿಸಿ.. ಮಾಜಿ ಸಚಿವ ಆರ್ ವಿ ದೇಶಪಾಂಡೆ ಮನವಿ - ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್

ಭೀಕರ ಪ್ರವಾಹದಿಂದ ರಾಜ್ಯದ ಹಲವಾರು ಜಿಲ್ಲೆಗಳ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕೇಂದ್ರ ಕೇವಲ 1200 ಕೋಟಿ ಮಧ್ಯಂತರ ಅನುದಾನ ನೀಡಿದ್ದು, ಮೊತ್ತವನ್ನು ಕನಿಷ್ಟ ಪಕ್ಷ 5000 ಕೋಟಿಗೆ ಏರಿಸಬೇಕು ಎಂದು ಮಾಜಿ ಸಚಿವ ಆರ್‌ ವಿ ದೇಶಪಾಂಡೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ಗೆ ಮನವಿ ಮಾಡಿದರು.

ಮಧ್ಯಂತರ ಪರಿಹಾರಧವನ್ನ ಕನಿಷ್ಟ 5000ಕ್ಕೆ ಏರಿಸಿ: ಮಾಜಿ ಸಚಿವ ಆರ್.ವಿ ದೇಶಪಾಂಡೆ ಮನವಿ

By

Published : Oct 5, 2019, 11:07 PM IST

ಹುಬ್ಬಳ್ಳಿ: ರಾಜ್ಯ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ಸರ್ಕಾರ ಅಲ್ಪ ಪ್ರಮಾಣದ ನೆರೆ ಪರಿಹಾರ ಬಿಡುಗಡೆ ಮಾಡಿರೋದು ಸಾಲುವುದಿಲ್ಲ. ಮಧ್ಯಂತರ ಪರಿಹಾರದ ಮೊತ್ತವನ್ನು ಏರಿಸಬೇಕು ಎಂದು ನಿರ್ಮಲಾ ಸೀತಾರಾಮನ್ ಅವರಲ್ಲಿ ಮಾಜಿ ಸಚಿವ ಆರ್ ವಿ ದೇಶಪಾಂಡೆ ಮನವಿ ಮಾಡಿದರು.

ನಗರದ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ನಿರ್ಮಲ ಸೀತಾರಾಮನ್​ರನ್ನ ಭೇಟಿ ಮಾಡಿ ಮಾತನಾಡಿದ ಆರ್‌ ವಿ ದೇಶಪಾಂಡೆ, ಭೀಕರ ಪ್ರವಾಹದಿಂದ ರಾಜ್ಯದ ಹಲವಾರು ಜಿಲ್ಲೆಗಳ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಈ ಹಿನ್ನಲೆ ನೆರೆ ಪರಿಹಾರವಾಗಿ ರಾಜ್ಯ ಸರ್ಕಾರ 38 ಸಾವಿರ ಕೋಟಿಯ ಬೇಡಿಕೆಯಿಟ್ಟಿತ್ತು. ಆದರೆ, ಕೇಂದ್ರ ಕೇವಲ 1200 ಕೋಟಿ ಅನುದಾನ ನೀಡಿದೆ. ಇದು ಯಾತಕ್ಕೂ ಸಾಲುವುದಿಲ್ಲ. ಹೀಗಾಗಿ ಮಧ್ಯಂತರ ಪರಿಹಾರಧನದ ಮೊತ್ತವನ್ನು ಕನಿಷ್ಟ ಪಕ್ಷ 5000 ಕೋಟಿಗೆ ಏರಿಸಬೇಕು ಎಂದು ಮನವಿ ಮಾಡಿದರು.

ABOUT THE AUTHOR

...view details