ಹುಬ್ಬಳ್ಳಿ :ಕಮಿಟಿಯೊಳಗಿನ ಸದಸ್ಯರ ಬದಿದಾಟದಿಂದಾಗಿ ಹಲವು ವರ್ಷದಿಂದ ಆಶ್ರಯ ಪಡೆದಿದ್ದ ವೃದ್ಧರು ಬೀದಿಪಾಲಾಗಿದ್ದಾರೆ. ಇಲ್ಲಿನ ಕೇಶ್ವಾಪುರದಲ್ಲಿನ ವೃದ್ಧಾಶ್ರಮದ ಜಾಗವನ್ನು ಸೊಸೈಟಿ ಆಫ್ ವಿಲ್ಸೆಂಟ್ ತನ್ನ ವಶಕ್ಕೆ ಪಡೆದಿದ್ದು, ವೃದ್ಧರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ.
30ಕ್ಕೂ ಹೆಚ್ಚು ವೃದ್ಧರಿಗೆ ಆಶ್ರಯ ಕಲ್ಪಿಸಿದ್ದ ಜಾಗದಲ್ಲಿ ಸೊಸೈಟಿ ಆಫ್ ವಿಲ್ಸೆಂಟ್ ಗೆಸ್ಟ್ಹೌಸ್ ನಿರ್ಮಿಸಲು ಮುಂದಾಗಿದ್ದು, ಇದರಿಂದ ವೃದ್ಧಾಶ್ರಮ ಜಾಗ ತೆರವು ಮಾಡಿದೆ ಎಂದು ವೃದ್ಧಾಶ್ರಮದ ಅಧ್ಯಕ್ಷ ರಾಜು ಜೋಸೆಫ್ ಆರೋಪಿಸಿದ್ದಾರೆ.
ಇಲ್ಲಿದ್ದ ವೃದ್ಧರನ್ನು ಕಾರವಾರದ ವೃದ್ಧಾಶ್ರಮಕ್ಕೆ ಬಿಟ್ಟು ಬರಲಾಗಿತ್ತು. ಆದರೆ, ಅಲ್ಲಿ ವ್ಯವಸ್ಥೆ ಸರಿಯಿಲ್ಲದ ಕಾರಣ ವೃದ್ಧರು ಮತ್ತೆ ಅಲ್ಲಿಂದ ಇಲ್ಲಿಗೆ ಬಂದಿದ್ದಾರೆ. ಹಳೆಯ ಕಮಿಟಿ ಸದಸ್ಯರಾಗಿದ್ದ ಸ್ಟೀವನ್ ಕರಡಿ, ಫೆಸಿಲ್ಲಾ ಲಾಯ್ಡ್ ಅವರ ಸಹೋದರಿ ಮತ್ತು ಸ್ಟೀವನ್ ಅಳಿಯ ಬ್ಯಾಯನ್ ಡಿಸೋಜ, ಬ್ರಿಗೇಜಾ ಸೇರಿ ಹಲವರು ಆಶ್ರಮಕ್ಕೆ ನುಗ್ಗಿ ದಾಂಧಲೆ ಮಾಡಿ ಸಿಸಿ ಕ್ಯಾಮೆರಾ ಸೇರಿದಂತೆ ಲಾಕರ್ಗಳನ್ನು ಮುರಿದು ಅಲ್ಲಿದ್ದ ದಾಖಲೆ ಪತ್ರಗಳನ್ನ ಮತ್ತು ಒಡವೆಗಳನ್ನು ತುಂಬಿಕೊಂಡು ಹೋಗಿದ್ದಾರೆ ಅಂತಾ ಆರೋಪಿಸಿದ್ದಾರೆ.