ಕರ್ನಾಟಕ

karnataka

ETV Bharat / state

ರಾಜ್ಯಪಾಲರನ್ನು ಭೇಟಿಯಾಗುವುದು ಸಂವಿಧಾನ ಬದ್ದ.. ಮಾಜಿ ಶಾಸಕ ಎನ್ ಎಚ್ ಕೋನರೆಡ್ಡಿ

ಮಹದಾಯಿ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಶಾಸಕ ಎನ್ ಎಚ್ ಕೋನರೆಡ್ಡಿ, ಮಳೆ-ಚಳಿಯ ನಡುವೆಯೂ‌ ಹೋರಾಟಗಾರರು ಧರಣಿ ಮಾಡುತ್ತಿದ್ದಾರೆ. ಅವರ ಸಮಸ್ಯೆಯನ್ನು ಆಲಿಸಲು ಸರ್ಕಾರ ಪ್ರಯತ್ನ ಕೂಡಾ ಮಾಡುತ್ತಿಲ್ಲ ಎಂದು ಹರಿಹಾಯ್ದಿದ್ದಾರೆ.

ಎನ್.ಎಚ್. ಕೋನರೆಡ್ಡಿ

By

Published : Oct 19, 2019, 4:46 PM IST

ಧಾರವಾಡ:ಮಹದಾಯಿ ಹೋರಾಟಗಾರರಿಗೆ ರಾಜ್ಯಪಾಲರು ಭೇಟಿಯಾಗದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಎನ್ ಎಚ್ ಕೋನರೆಡ್ಡಿ ಪ್ರತಿಕ್ರಿಯಿಸಿ, ಹೋರಾಟಗಾರರು ಎರಡು ತಿಂಗಳ ಹಿಂದೆಯೇ ಪತ್ರ ಬರೆದಿದ್ದಾರೆ. ಅವರಿಗೆ ನೆನಪು ಮಾಡಿದ್ದಾರೆ. ನಂತರ ನಿಯೋಗ ಒಂದು ಹೋಗಿದೆ. ದೇಶದ ರಾಷ್ಟ್ರಪತಿಯಾಗಲಿ, ರಾಜ್ಯಪಾಲರಿಗಾಗಲೀ ದೇಶದ ಪ್ರಜೆಗಳು ಭೇಟಿ ಮಾಡಿ ಇಂತಹ ಸೀರಿಯಸ್ ವಿಷಯಗಳ ಬಗ್ಗೆ ಮನವಿ ಮಾಡಬಹುದು. ಅದು ಸಂವಿಧಾನ ಬದ್ದವಾಗಿದೆ. ಇದಕ್ಕೆ ಸರ್ಕಾರ ಅನುಮತಿ ನೀಡಬೇಕು ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಎನ್ ಎಚ್ ಕೋನರೆಡ್ಡಿ..

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ-ಚಳಿಯ ನಡುವೆಯೂ‌ ಹೋರಾಟಗಾರರು ಧರಣಿ ಮಾಡುತ್ತಿದ್ದಾರೆ. ಅವರ ಸಮಸ್ಯೆಯನ್ನು ಆಲಿಸಲು ಸರ್ಕಾರ ಪ್ರಯತ್ನ ಕೂಡಾ ಮಾಡುತ್ತಿಲ್ಲ ಎಂದು ಹರಿಹಾಯ್ದರು.

ಬೆಂಗಳೂರಿಗೆ ಹೋದ್ರೆ ರೈತರಿಗೆ ಬೆಲೆನೇ ಇಲ್ಲದಾಗಿದೆ. ರೈತರನ್ನು ಕಡೆಗಣಿಸಿದ ಸರ್ಕಾರಕ್ಕೆ ಒಂದು ಕಾಲ ಬಂದೆ ಬರುತ್ತೆ. ಅತ್ತೆಗೊಂದು ಕಾಲ ಸೊಸೆಗೊಂದು ಕಾಲದಂತೆ. ಹೀಗೆ ಮುಂದುವರೆದರೆ ನಿಮ್ಮನ್ನು ಮನೆಗೆ ಕಳಿಸುವಂತಹ ಕಾಲ ಬಂದೇ ಬರುತ್ತೆ ಎಂದು‌‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರನ್ನು ಹಗಲು ರಾತ್ರಿ ಕೂರಿಸಿದ ಶಾಪ ತಟ್ಟದೆ ಇರಲ್ಲ. ದಯವಿಟ್ಟು ರಾಜ್ಯಪಾಲರ ಭೇಟಿಗೆ ಅವಕಾಶ ಮಾಡಿಕೊಡಬೇಕಿತ್ತು. ರಾಜ್ಯಪಾಲರು ಮನವಿ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿ ಕಳುಹಿಸಬಾರದಿತ್ತು.‌ ಸಂವಿಧಾನಬದ್ದವಾಗಿ ಎಲ್ಲರಿಗೂ ಭೇಟಿಯಾಗುವ ಅವಕಾಶ ಇದೆ ಎಂದು ಹೇಳಿದ್ದಾರೆ.

ತೀರ್ಪು ಬಂದು ಎರಡು ವರ್ಷವಾಯಿತು. ಇತ್ತೀಚೆಗೆ ಪ್ರಧಾನಿಯವರು ಬಂದಾಗ ನೀರು ಕೊಡುವುದಾಗಿ ಹೇಳಿದ್ರು. ಪ್ರಹ್ಲಾದ್ ಜೋಶಿಯವರು ದೇಶದ ಮಂತ್ರಿಯಾಗಿದ್ದಾರೆ. ಅವರ ಮಾತು ನಡಿಯುತ್ತೆ ದಯವಿಟ್ಟು ಮಹದಾಯಿ ನ್ಯಾಯಾಧೀಕರಣದ ಅಧಿಸೂಚನೆ ಹೊರಡಿಸಲು ಪ್ರಯತ್ನ ಮಾಡಿ ಎಂದು‌ ಸಲಹೆ ನೀಡಿದ್ದಾರೆ.

ABOUT THE AUTHOR

...view details