ಧಾರವಾಡ: ನವ ವಿವಾಹಿತೆಯೊಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮುಮ್ಮಿಗಟ್ಟಿ ಗ್ರಾಮದಲ್ಲಿ ನಡೆದಿದೆ.
ಮದುವೆಯಾಗಿ ಎರಡೇ ತಿಂಗಳಿಗೆ ಆತ್ಮಹತ್ಯೆಗೆ ಶರಣಾದ ಗೃಹಿಣಿ! - ಧಾರವಾಡ ಮದುವೆಯಾದ ಮಹಿಳೆ ಆತ್ಮಹತ್ಯೆ,
ಮದುವೆಯಾಗಿ ಎರಡೇ ತಿಂಗಳಿಗೆ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.
ಮದುವೆಯಾಗಿ ಎರಡೇ ತಿಂಗಳಿಗೆ ಆತ್ಮಹತ್ಯೆಗೆ ಶರಣಾದ ಗೃಹಿಣಿ
ಮೃತಳು ರಂಜಿತಾ ಹಂಚಿನಮನಿ (19) ಎಂದು ಗುರುತಿಸಲಾಗಿದೆ. ಮುಮ್ಮಿಗಟ್ಟಿ ಗ್ರಾಮದ ಮಂಜುನಾಥ ಹಂಚಿನಮನಿ ಎಂಬಾತನೊಂದಿಗೆ ರಂಜಿತಾ ಕಳೆದ ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ಗಂಡನ ಮನೆಯವರು ರಂಜಿತಾಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಿರುಕುಳದಿಂದ ಬೇಸತ್ತ ರಂಜಿತಾ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
Last Updated : Mar 2, 2021, 1:53 PM IST