ಹುಬ್ಬಳ್ಳಿ: ಹು-ಧಾ ಮಹಾನಗರ ಪೊಲೀಸ್ ಕಮಿಷನರೇಟ್ನ ಪೊಲೀಸ್ ತರಬೇತಿ ಶಾಲೆಯ ವತಿಯಿಂದ 7ನೇ ತಂಡದ ಮಹಿಳಾ ಜೈಲ್ ವಾರ್ಡರ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮಕ್ಕೆ ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾನಿರೀಕ್ಷಕ ಹೆಚ್.ಜಿ.ರಾಘವೇಂದ್ರ ಸುಹಾಸ್ ಚಾಲನೆ ನೀಡಿದರು.
ಈ ವೇಳೆ ಪ್ರಶಿಕ್ಷಣಾರ್ಥಿಗಳು ನಿರ್ಗಮನ ಪಥ ಸಂಚಲನದ ಮೂಲಕ ಗೌರವ ಸಮರ್ಪಣೆ ಮಾಡಿದರು. ಬಳಿಕ ಮಾತನಾಡಿದ ಉತ್ತರ ವಲಯದ ಪೊಲೀಸ್ ಮಹಾನಿರೀಕ್ಷಕ ಹೆಚ್. ಜಿ.ರಾಘವೇಂದ್ರ ಸುಹಾಸ್, ಹು-ಧಾ ಮಹಾನಗರ ಪೊಲೀಸ್ ಕಮೀಷನರೇಟ್ ಹಾಗೂ ಧಾರವಾಡ ಜಿಲ್ಲಾ ಪೊಲೀಸ್ ವತಿಯಿಂದ ಈಗಾಗಲೇ ಉತ್ತಮ ತರಬೇತಿ ನೀಡಿದ್ದಾರೆ. ದೇಶಕ್ಕೆ ಬಾರ್ಡರ್ ಎಷ್ಟು ಮುಖ್ಯವೋ ದೇಶದ ಒಳಗೆ ಜೈಲ್ ವಾರ್ಡರ್ ಕೂಡ ಅಷ್ಟೇ ಮುಖ್ಯ. ನಾವೆಲ್ಲ 'ಅಪರಾಧವನ್ನು ವಿರೋಧಿಸುತ್ತೇವೆ, ಅಪರಾಧಿಗಳನ್ನಲ್ಲ' ಎಂಬ ಘೋಷ ವಾಕ್ಯವನ್ನು ಎಲ್ಲ ವಾರ್ಡರ್ಗಳು ಕೂಡ ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.