ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕಾಗಿ ಯುವಕನೊಬ್ಬನಿಗೆ ಚಾಕು ಇರಿದ ಘಟನೆ ಹುಬ್ಬಳ್ಳಿಯ ಮಂಟೂರ ರಸ್ತೆಯ ಮ್ಯಾಂಗನೀಸ್ ಪ್ಲಾಟ್ನಲ್ಲಿ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ: ಯುವಕನ ಸ್ಥಿತಿ ಗಂಭೀರ - ಹುಬ್ಬಳ್ಳಿಯಲ್ಲಿ ಚಾಕು ಇರಿತ ಪ್ರಕರಣ
ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಚಾಕುವಿನಿಂದ ಇರಿದ ಪ್ರಕರಣ ಹುಬ್ಬಳ್ಳಿಯ ಮಂಟೂರ ರಸ್ತೆಯ ಮ್ಯಾಂಗನೀಸ್ ಪ್ಲಾಟ್ನಲ್ಲಿ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
![ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ: ಯುವಕನ ಸ್ಥಿತಿ ಗಂಭೀರ hubli](https://etvbharatimages.akamaized.net/etvbharat/prod-images/768-512-07:56:00:1622989560-kn-hbl-02-chaku-iritaa-av-ka10025-06062021195134-0606f-1622989294-962.jpg)
hubli
ಡೇವಿಡ್ ಎಂಬ ಯುವಕನಿಗೆ ವಿಜಯ ಯಮನೂರಿ ದೇವರಮನಿ (17) ಎಂಬಾತ ಚಾಕು ಇರಿದಿದ್ದಾನೆ. ಹೊಟ್ಟೆ ಮತ್ತು ಇತರ ಕಡೆ ಚಾಕು ಇರಿದ ಪರಿಣಾಮ ಡೇವಿಡ್ ಸ್ಥಿತಿ ಗಂಭೀರವಾಗಿದೆ. ಸುದ್ದಿ ತಿಳಿದ ಬೆಂಡಿಗೇರಿ ಪೊಲೀಸರು ಸ್ಥಳಕ್ಕಾಗಮಿಸಿ ಗಾಯಗೊಂಡ ವಿಜಯನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು, ಚಾಕು ಇರಿದು ಎಸ್ಕೇಪ್ ಆಗುತ್ತಿದ್ದ ಆರೋಪಿ ವಿಜಯನನ್ನು ಬಂಧಿಸಿದ್ದಾರೆ.
ಡೇವಿಡ್ ಹಲವಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.