ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ: ಚಾಕುವಿನಿಂದ ಇರಿದು ವ್ಯಕ್ತಿಯ ಹತ್ಯೆ - ಈಟಿವಿ ಭಾರತ ಕನ್ನಡ

ಹಳೇ ವೈಷಮ್ಯದಲ್ಲಿ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದು ಹತ್ಯೆಗೈದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

man-stabbed-to-death-in-hubballi
ಹುಬ್ಬಳ್ಳಿ: ಹಳೇ ವೈಷಮ್ಯ ಹಿನ್ನೆಲೆ ಚಾಕು ಇರಿದು ವ್ಯಕ್ತಿ ಕೊಲೆ

By

Published : Nov 13, 2022, 9:13 AM IST

Updated : Nov 13, 2022, 10:00 AM IST

ಹುಬ್ಬಳ್ಳಿ:ಹಳೇ ಹುಬ್ಬಳ್ಳಿಯ ದುರ್ಗದಬೈಲ್ ಸರ್ಕಲ್ ಬಳಿ ಸಂತೋಷ ಮುರಗೋಡ ಎಂಬಾತನ ಹೊಟ್ಟೆಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಸಂತೋಷ ಹಾಗೂ ರೌಡಿಶೀಟರ್ ಜಂಗ್ಲಿಪೇಟ್ ಶಿವನ ನಡುವೆ ವೈಷಮ್ಯವಿತ್ತು. ಶಿವ ತನ್ನ ಸಹಚರನ ಜೊತೆ ಸೇರಿಕೊಂಡು ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಮಾಹಿತಿ ತಿಳಿದ ಕಸಬಾಪೇಟೆ ಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ, ಮಾಹಿತಿ ಪಡೆದಿದ್ದು ತನಿಖೆ ನಡೆಯುತ್ತಿದೆ.

ಇದನ್ನೂ ಓದಿ:ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಶಿಕ್ಷಕನಿಗೆ ಧರ್ಮದೇಟು..

Last Updated : Nov 13, 2022, 10:00 AM IST

ABOUT THE AUTHOR

...view details