ಹುಬ್ಬಳ್ಳಿ:ಹಣದ ವಿಚಾರಕ್ಕಾಗಿ ಸಹೋದರನಿಗೆ ಚಿಕ್ಕಪ್ಪನ ಮಗ ಚಾಕುವಿನಿಂದ ಇರಿದ ಘಟನೆ ಈಶ್ವರ ನಗರದಲ್ಲಿ ನಡೆದಿದೆ.
ಹಣದ ವಿಚಾರಕ್ಕೆ ಅಣ್ಣನಿಗೆ ಚಾಕುವಿನಿಂದ ಇರಿದ ತಮ್ಮ
ಹಣದ ವಿಚಾರವಾಗಿ ಮಾತಿಗೆ ಮಾತಿ ಬೆಳೆದು ಅಣ್ಣನಿಗೆ ತಮ್ಮ ಚಾಕುವಿನಿಂದ ಇರಿದ ಘಟನೆ ನಡೆದಿದೆ.
ಹಣದ ವಿಚಾರಕ್ಕೆ ಅಣ್ಣನಿಗೆ ಚಾಕುವಿನಿಂದ ಇರಿದ ತಮ್ಮ
ಸುನೀಲ್ ಕೃಷ್ಣಾ ಘಾಟೇಕರ ಇರಿತಕ್ಕೊಳಗಾದ ಯುವಕ. ಈತನ ಚಿಕ್ಕಪ್ಪನ ಮಗ ಮಂಜು ಚಾಕು ಇರಿದಾತ. ಮದುವೆಗೆ ಹಣ ನೀಡುವಂತೆ ಸುನೀಲನನ್ನು ಮಂಜು ಪೀಡಿಸುತ್ತಿದ್ದನಂತೆ. ಇದೇ ವಿಚಾರವಾಗಿ ಮಾತಿಗೆ ಮಾತಿ ಬೆಳೆದು ಸುನೀಲ್ಗೆ ಮಂಜು ಚಾಕುವಿನಿಂದ ಬೆನ್ನು ಮತ್ತು ದೇಹದ ಇತರೆಡೆ ಇರಿದು ಗಾಯಗೊಳಿಸಿದ್ದಾನೆ ಎನ್ನಲಾಗ್ತಿದೆ.
ಸುನೀಲ್ನನ್ನು ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಜುನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕಸಬಾ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.