ಹುಬ್ಬಳ್ಳಿ :ನಿವೇಶನ ನೀಡದೇ ವಂಚನೆ ಮಾಡಲಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ.
ಆರ್ ಲಕ್ಷ್ಮಣ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಈತ ತನ್ನ ಸ್ನೇಹಿತರೊಂದಿಗೆ ಶಂಕರ್ ಶೇಟ್ ಎಂಬುವರಿಗೆ ನಿವೇಶನಕ್ಕಾಗಿ ಹಣ ಹೂಡಿಕೆ ಮಾಡಿದ್ದರಂತೆ. ಆದರೆ, ಈವರೆಗೂ ಹಣವನ್ನು ಮರಳಿಸಿದೆ, ನಿವೇಶನವನ್ನೂ ನೀಡದೆ ಶಂಕರ್ ಶೇಟ್ ಮೋಸ ಮಾಡಿದ್ದಾರೆ ಎಂದು ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.