ಕರ್ನಾಟಕ

karnataka

ETV Bharat / state

ಹಾವಿನೊಂದಿಗೆ ಚೆಲ್ಲಾಟ: ಪ್ರಾಣ ಕಳೆದುಕೊಂಡ ಯುವಕ - man died during playing with snake news

ಸರಸವಾಡಲು ಹೋಗಿ ಹಾವು ಕಚ್ಚಿ ವ್ಯಕ್ತಿ ಸಾವನ್ನಪ್ಪಿದ್ದ ಘಟನೆ ಹುಬ್ಬಳ್ಳಿಯ ಕಲಘಟಗಿ ತಾಲೂಕು ವ್ಯಾಪ್ತಿಯ ಗ್ರಾಮದಲ್ಲಿ ನಡೆದಿದೆ.

man dies due to snake bite
ಹಾವು ಕಚ್ಚಿ ವ್ಯಕ್ತಿ ಸಾವು

By

Published : Dec 9, 2020, 10:47 AM IST

ಹುಬ್ಬಳ್ಳಿ:ಹಾವಿನೊಂದಿಗೆ ಚೆಲ್ಲಾಟ ಒಳ್ಳೆಯದಲ್ಲ ಎಂಬುದು ಗೊತ್ತಿದ್ದರೂ, ವ್ಯಕ್ತಿಯೊಬ್ಬ ಇದೇ ಕೆಲಸಕ್ಕೆ ಕೈಹಾಕಿ ಮೃತಪಟ್ಟ ಘಟನೆ ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮದಲ್ಲಿ ನಡೆದಿದೆ.

ಹಾವು ಕಚ್ಚಿ ವ್ಯಕ್ತಿ ಸಾವು

ಸಿದ್ದಪ್ಪ ತಳವಾರ (45) ಪ್ರಾಣ ಕಳೆದುಕೊಂಡ ವ್ಯಕ್ತಿ. ಈತ ಎಲ್ಲೇ ಹಾವುಗಳು ಕಂಡರೂ ಅವುಗಳ ಜೊತೆ ಆಟವಾಡುತ್ತಿದ್ದನಂತೆ.‌ ಅದೇ ರೀತಿ ಹಾವು ನೋಡಿ ಆಟ ಆಡಲು ಹೋಗಿದ್ದ ವೇಳೆ ರೊಚ್ಚಿಗೆದ್ದ ಹಾವು ಕಚ್ಚಿದೆ. ಪರಿಣಾಮ, ಸಿಟ್ಟಿಗೆದ್ದ ಆತ ತಾನೇ ಹಾವನ್ನು ಕೊಂದು ಹಾಕಿದ್ದಾನೆ. ಬಳಿಕ ದೇಹಕ್ಕೆ ವಿಷವೇರಿ ಆತನೂ ಸ್ಥಳದಲ್ಲೇ ಮೃತಪಟ್ಟಿದ್ದಾ‌ನೆ ಎಂದು ತಿಳಿದು ಬಂದಿದೆ.

ವಿಷಯ ತಿಳಿಯುತ್ತಿದಂತೆ ಸ್ಥಳಕ್ಕೆ ಆಗಮಿಸಿದ ಕಲಘಟಗಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details