ಹುಬ್ಬಳ್ಳಿ:ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತ ಪಟ್ಟಿರುವ ಘಟನೆ ಕಲಘಟಗಿಯ ನೀರಸಾಗರ ಕ್ರಾಸ್ ಬಳಿ ನಡೆದಿದೆ.
ಬೈಕ್ಗೆ ಟಿಪ್ಪರ್ ಲಾರಿ ಡಿಕ್ಕಿ: ದ್ವಿಚಕ್ರ ವಾಹನ ಸವಾರ ದುರ್ಮರಣ - hubli latest crime news
ಹುಬ್ಬಳ್ಳಿಯ ಕಲಘಟಗಿಯ ನೀರಸಾಗರ ಕ್ರಾಸ್ ಬಳಿ ಬೈಕ್ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿದ್ದಾರೆ.

ಬೈಕ್ ಸವಾರ ದುರ್ಮರಣ
ಹನುಮಂತಪ್ಪ ಬಸವಂತಪ್ಪ ಸಾವಂತನವರ(47) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಟಿಪ್ಪರ್ ಲಾರಿಯೊಂದು ಕಲ್ಲು ತುಂಬಿಕೊಂಡು ಧಾರವಾಡ ಕಡೆಯಿಂದ ಕಲಘಟಗಿ ಹೊರಟಿದ್ದು, ಬೈಕ್ಗೆ ಡಿಕ್ಕಿ ಹೊಡೆದಿದೆ. ಅಪಘಾತ ನಂತರ ಟಿಪ್ಪರ್ ಲಾರಿ ಚಾಲಕ ಪರಾರಿಯಾಗಿದ್ದಾರೆ.
ಗಾಯಾಳು ಹನುಮಂತಪ್ಪ ಬಸವಂತಪ್ಪ ಸಾವಂತನವರ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದು, ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.