ಧಾರವಾಡ : ಮಾಜಿ ಸಚಿವ ವಿನಯ್ ಕುಲಕರ್ಣಿ ಭೇಟಿ ಮಾಡಲು ಬೆಂಗಳೂರಿಗೆ ಹೊರಟಿದ್ದ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.
ಧಾರವಾಡದ ಮರೇವಾಡ ಗ್ರಾಮದ ಪರಮೇಶ್ವರ ಗಾಣಿಗೇರ ಮೃತ ವ್ಯಕ್ತಿ. ಇವರು ಬೆಂಗಳೂರಿಗೆ ವಿನಯ್ ಕುಲಕರ್ಣಿ ನೋಡಲು ಹೊರಟಾಗ ತುಮಕೂರ ಬಳಿ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ.
ಬೆಂಬಲಿಗನ ಸಾವಿನ ಸುದ್ದಿ ತಿಳಿದು ತುಮಕೂರಿಗೆ ಆಗಮಿಸಿದ ವಿನಯ್ ಕುಲಕರ್ಣಿ ಪರಮೇಶ್ವರ ಅವರು ವಿನಯ್ ಕಟ್ಟಾ ಬೆಂಬಲಿಗರಾಗಿದ್ದರು. ನ್ಯಾಯಾಲಯ ವಿನಯ್ ಕುಲಕರ್ಣಿಗೆ ಧಾರವಾಡ ಜಿಲ್ಲೆಗೆ ಬರುವುದಕ್ಕೆ ಅವಕಾಶ ನೀಡದ ಹಿನ್ನೆಲೆ, ವಿನಯ್ ಭೇಟಿಗೆ ಬೆಂಗಳೂರಿಗೆ ಹೊರಟ್ಟಿದ್ದರು ಎನ್ನಲಾಗಿದೆ.
ಇನ್ನು ಬೆಂಬಲಿಗನ ಸಾವಿನ ಸುದ್ದಿ ತಿಳಿದು ತುಮಕೂರಿಗೆ ಆಗಮಿಸಿದ ವಿನಯ್ ಕುಲಕರ್ಣಿ, ಮೃತ ಶರೀರವನ್ನು ಧಾರವಾಡಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.