ಹುಬ್ಬಳ್ಳಿ: ಚೇತನಾ ಕಾಲೇಜು ಬಳಿಯ ಬಸ್ ನಿಲ್ದಾಣದಲ್ಲೇ ಮಧ್ಯಮ ವಯಸ್ಸಿನ ವ್ಯಕ್ತಿಯೊಬ್ಬ ನೇಣಿಗೆ ಶರಣಾಗಿದ್ದು, ಮೃತ ವ್ಯಕ್ತಿಯ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಹುಬ್ಬಳ್ಳಿ ಬಸ್ ಸ್ಟಾಪ್ನಲ್ಲಿಯೇ ನೇಣಿಗೆ ಶರಣಾದ ವ್ಯಕ್ತಿ.!
ಬೆಳ್ಳಂ ಬೆಳಗ್ಗೆ ವಾಯುವಿಹಾರ ಮಾಡಲು ಹೊರಟವರು ವಿದ್ಯಾ ನಗರದ ಚೇತನಾ ಕಾಲೇಜು ಬಳಿ ದಂಗಾಗಿ ನಿಂತಿದ್ದಾರೆ. ಚೇತನಾ ಕಾಲೇಜು ಬಳಿಯ ಬಸ್ ಸ್ಟಾಪ್ನಲ್ಲಿಯೇ ವ್ಯಕ್ತಿಯೊಬ್ಬ ನೇಣಿಗೆ ಶರಣಾಗಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಅನುಮಾನ ಮೂಡಿದೆ.
ಹುಬ್ಬಳ್ಳಿ ಬಸ್ ಸ್ಟಾಪ್ನಲ್ಲಿಯೇ ನೇಣಿಗೆ ಶರಣಾದ ವ್ಯಕ್ತಿ...!
ಸುಮಾರು 40 ವಯಸ್ಸಿನ ವ್ಯಕ್ತಿ ಬಸ್ ನಿಲ್ದಾಣದಲ್ಲಿಯೇ ನೇಣಿಗೆ ಶರಣಾಗಿದ್ದಾನೆ. ಬೆಳಗ್ಗೆ ಈ ರಸ್ತೆಯಲ್ಲಿ ವಾಯುವಿಹಾರ ಮಾಡುವವರು ಈತನ ಶವ ನೋಡಿ ಆಘಾತಕ್ಕೊಳಗಾಗಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಅನುಮಾನ ಮೂಡಿದ್ದು, ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.