ಕರ್ನಾಟಕ

karnataka

ETV Bharat / state

ಪಕ್ಷ ಬದಲಾಯಿಸಿದ ನಂತರ ಭಾವನೆಗಳು ಬದಲಾಗಬಾರದು: ಶೆಟ್ಟರ್ ವಿರುದ್ಧ ಮಹೇಶ ಟೆಂಗಿನಕಾಯಿ ಕಿಡಿ

ಹುಬ್ಬಳ್ಳಿಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಅವರು ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ವಿರುದ್ಧ ಗುಡುಗಿದ್ದಾರೆ.

ಶಾಸಕ ಮಹೇಶ ಟೆಂಗಿನಕಾಯಿ
ಶಾಸಕ ಮಹೇಶ ಟೆಂಗಿನಕಾಯಿ

By ETV Bharat Karnataka Team

Published : Jan 15, 2024, 3:46 PM IST

Updated : Jan 15, 2024, 6:33 PM IST

ಶಾಸಕ ಮಹೇಶ ಟೆಂಗಿನಕಾಯಿ ಹೇಳಿಕೆ

ಹುಬ್ಬಳ್ಳಿ :30 ವರ್ಷಗಳ ಹಿಂದೆ ಶ್ರೀರಾಮ‌ ಚಂದ್ರ ಜೈ ಅಂತಾ ಜಗದೀಶ ಶೆಟ್ಟರ್ ಹೇಳುತ್ತಿದ್ದರು. ಈಗ ಪಕ್ಷ ಬದಲಾಯಿಸಿದ ನಂತರ ಭಾವನೆಗಳು ಬದಲಾಗಬಾರದು ಎಂದು ಶಾಸಕ ಮಹೇಶ್​ ತೆಂಗಿನಕಾಯಿ ಅವರು ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶದ ಜನ ರಾಮ‌ಮಂದಿರದ ಬಗ್ಗೆ ಉತ್ತಮ ಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಶೆಟ್ಟರ್ ಅವರು ಈ ರೀತಿ ಕ್ಷುಲ್ಲಕ ರಾಜಕೀಯ ಮಾಡಬಾರದು ಎಂದರು. ಘರ್ ವಾಪಸ್ಸಿ ಎಂಬ ಜಗದೀಶ ಶೆಟ್ಟರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ ಅವರಿಗೆ ಕಾಂಗ್ರೆಸ್ ನಲ್ಲಿ ಬೆಲೆ ಇಲ್ಲ ಎಂಬುದು‌ ಸ್ಪಷ್ಟವಾಗಿದೆ. ಕಾಂಗ್ರೆಸ್​ನ‌ ಹಲವು ನಾಯಕರೇ ಈ ಬಗ್ಗೆ ಅವರಿಗೆ ಬೆಲೆ‌ ಇಲ್ಲ ಅನ್ನೋ ಮಾತನ್ನು ಹೇಳಿದ್ದಾರೆ. ನಾ ಘರ್ ಕಾ ನಾ ಘಾಟ್ ಕಾ ಅನ್ನೋ‌‌ ಪರಿಸ್ಥಿತಿ ಶೆಟ್ಟರ್​ಗೆ ಬಂದಿದೆ. ಹೀಗಾಗಿ‌ ಹತಾಶ ಭಾವನೆಯಿಂದ ಜಗದೀಶ ಶೆಟ್ಟರ್​ ಮಾತನಾಡುತ್ತಿದ್ದಾರೆ. ಹೀಗಾಗಿ ಅವರನ್ನು ಬಿಜೆಪಿಗೆ ವಾಪಸ್ ಕರೆತರುವ ಬಗ್ಗೆ ಯಾವುದೇ ಚರ್ಚೆ ಇಲ್ಲ. ಅವರು ಕಾಂಗ್ರೆಸ್​ಗೆ ಹೋಗಿದ್ದಾರೆ ಅಲ್ಲಿಯೇ ಆರಾಮವಾಗಿರಲಿ ಎಂದು ಮಹೇಶ ತೆಂಗಿನಕಾಯಿ ವಾಗ್ದಾಳಿ ನಡೆಸಿದರು.

ಬಿಜೆಪಿಗೆ ಹೋಗುವ ಪ್ರಶ್ನೆ ಇಲ್ಲ- ಶೆಟ್ಟರ್​ :ಮತ್ತೊಂದೆಡೆ ಭಾನುವಾರದಂದುಹುಬ್ಬಳ್ಳಿಯಲ್ಲಿ ಜಗದೀಶ್​ ಶೆಟ್ಟರ್​ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವೇಳೆ, ನನ್ನನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳಬೇಕೆಂಬುದು ಹಲವು ನಾಯಕರ ಒತ್ತಾಸೆ. ಆದರೆ ನಾನು ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ. ನನಗಾಗಿರುವ ಅಪಮಾನವನ್ನು ಇನ್ನೂ ಮರೆತಿಲ್ಲ. ನಾನು ಬಿಜೆಪಿ ತೊರೆದ ನಂತರ ಆಗಿರುವ ಹಾನಿ ಬಗ್ಗೆ ಅವರಿಗೆ ಮನವರಿಕೆಯಾಗಿದೆ. ಈ ನಿಟ್ಟಿನಲ್ಲಿ ಕೆಲವರು ನನ್ನನ್ನು ವಾಪಸ್ ಕರೆತರುವ ಪ್ರಯತ್ನದಲ್ಲಿದ್ದಾರೆ. ಆದರೆ ಪಕ್ಷದ ಮುಖಂಡರು ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ, ಈ ವಿಷಯದ ಬಗ್ಗೆ ಚರ್ಚೆ ಮಾಡಿಲ್ಲ. ಯಾರು ಏನೇ ಪ್ರಯತ್ನ ಮಾಡಿದರೂ ನಾನು ಬಿಜೆಪಿಗೆ ಹಿಂದಿರುಗಿ ಹೋಗಲ್ಲ ಎಂದು ಹೇಳಿದ್ದರು.

ಮುಂದುವರೆದಂತೆ ಶ್ರೀರಾಮ ಮಂದಿರವನ್ನು ಬಿಜೆಪಿ ದಾಳವನ್ನಾಗಿ ಮಾಡಿಕೊಳ್ಳುತ್ತಿದೆ. ರಾಜಕಾರಣದಲ್ಲಿ ಧರ್ಮ ಇರಬೇಕೇ ಹೊರತು ಧರ್ಮದಲ್ಲಿ ರಾಜಕಾರಣ ಇರಬಾರದು. ಆದರೆ, ಬಿಜೆಪಿ ಧರ್ಮದಲ್ಲಿ ರಾಜಕಾರಣವನ್ನು ಬೆರೆಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್​ಗೆ ಆಹ್ವಾನ ನೀಡಿರುವುದು ದೇವಸ್ಥಾನದ ಟ್ರಸ್ಟೇ ಹೊರತು ಬಿಜೆಪಿ ಅಲ್ಲ. ಕಾಂಗ್ರೆಸ್ ಆಹ್ವಾನ ನಿರಾಕರಿಸಿರುವುದರ ಕುರಿತು ಟ್ರಸ್ಟ್ ಬೇಕಿದ್ದರೆ ಮಾತನಾಡಲಿ. ಅದನ್ನು ಬಿಟ್ಟು ಬಿಜೆಪಿಯವರು ಯಾಕೆ ಮಾತನಾಡುತ್ತಾರೆ. ಬಿಜೆಪಿಗೂ ರಾಮಮಂದಿರಕ್ಕೂ ಏನು ಸಂಬಂಧ. ರಾಮಮಂದಿರ ವಿಚಾರ ರಾಜಕಾರಣ ಆಗಲೇಬಾರದು. ನನ್ನನ್ನು ಸೇರಿಯೇ ರಾಮಮಂದಿರ ಆಗಬೇಕು ಎಂಬುದು ನೂರಾರು ಕೋಟಿ ಜನರ ಅಭಿಲಾಷೆಯಾಗಿತ್ತು ಎಂದು ಬಿಜೆಪಿ ವಿರುದ್ಧ ಶೆಟ್ಟರ್ ಕಿಡಿಕಾರಿದ್ದರು.

ಇದನ್ನೂ ಓದಿ :ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಲಿಪಶು ಮಾಡಲಾಗ್ತಿದೆ: ಪ್ರಹ್ಲಾದ್ ಜೋಶಿ

Last Updated : Jan 15, 2024, 6:33 PM IST

ABOUT THE AUTHOR

...view details