ಶಾಸಕ ಎನ್.ಹೆಚ್. ಕೋನರೆಡ್ಡಿ ಮಾತನಾಡಿದರು ಧಾರವಾಡ:''ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ರೈತರಿಗೆ ನಮ್ಮ ವಿರುದ್ಧ ಹೋರಾಟ ಮಾಡಲು ಬೇಡ ಎಂದಿಲ್ಲ. ಕೇಂದ್ರದ ಅರಣ್ಯ ಇಲಾಖೆ ಅನುಮತಿ ಕೊಡಬೇಕು. ಅವರು ಅನುಮತಿ ಕೊಟ್ಟರೆ ನಾಳೆಯೇ ಕೆಲಸ ಆರಂಭ ಆಗಲಿದೆ'' ಎಂದು ನವಲಗುಂದ ಶಾಸಕ ಎನ್ ಹೆಚ್ ಕೋನರೆಡ್ಡಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ನಾವೇ ರೈತರ ಪರ ಹೋರಾಟ ಮಾಡ್ತೇವೆ. ನಾವು ಯೋಜನೆ ಜಾರಿ ಆಗಲಿ ಎನ್ನುವವರು, ನನ್ನ ನಿರಂತರ ಹೋರಾಟ ಇರುವುದೇ ಕಳಸಾ ಬಂಡೂರಿ ಮಹದಾಯಿ ನೀರಿಗಾಗಿ. ನಾನು ಟೀಕೆ ಟಿಪ್ಪಣಿ ಮಾಡಲ್ಲ. ಕೇಂದ್ರ ಸಚಿವ ಜೋಶಿ ಅವರು ಪ್ರಧಾನಿ ಜೊತೆ ಆತ್ಮೀಯ ಇದ್ದಾರೆ. ಹೀಗಾಗಿ ಯೋಜನೆಗೆ ಕೊಡಿಸೋದು ಅವರಿಗೆ ದೊಡ್ಡ ಕೆಲಸವಲ್ಲ'' ಎಂದು ಹೇಳಿದರು.
ರಾಜ್ಯದ ಹಿತ ಹಾಗೂ ಕ್ಷೇತ್ರಕ್ಕಾಗಿ ಅನುಮತಿ ಕೊಡಿಸಿದರೆ, ಇದಕ್ಕಿಂತ ದೊಡ್ಡ ಮಾತು ಏನಿಲ್ಲ. ಅದರ ಕ್ರೆಡಿಟ್ ನಿಮಗೆ ಹೋಗಲಿ, ಲೋಕಸಭಾ ಚುನಾವಣೆ ಮೊದಲು ಇದನ್ನು ಜಾರಿ ಮಾಡಲಿ. ಗೋವಾ ಆಟ ಏನು ನಡೆಯಲ್ಲ. ಈಗಾಗಲೇ ಮಹದಾಯಿ ನ್ಯಾಯಾಧೀಕರಣ ತೀರ್ಪು ನಮ್ಮ ಪರ ಆಗಿದೆ. ಸುಪ್ರೀಂ ಕೊರ್ಟ್ ಆದೇಶದಂತೆ ಅಧಿಸೂಚನೆ ಹೊರಡಿಸಿದ್ದೇವೆ. ಡಿಪಿಆರ್ ಅನುಮತಿ ಆಗಿದೆ. ಕೇಂದ್ರದ ಅನುಮತಿ ಸಿಕ್ಕ ತಕ್ಷಣ ಕಾಮಗಾರಿ ಆಗೋದು ಮಾತ್ರ ಬಾಕಿ ಇದೆ'' ಎಂದು ಕೋನರೆಡ್ಡಿ ತಿಳಿಸಿದರು.
''ಯಾವ ವೈಲ್ಡ್ ಲೈಫು ಏನು ಇಲ್ಲ. ನಾನು ಅಲ್ಲಿ ಎಲ್ಲ ಕಡೆ ಓಡಾಡಿದ್ದೇನೆ. ನಾವು ನ್ಯಾಯಾಧೀಕರಣಕ್ಕೆ 33.46 ಟಿಎಂಸಿ ನೀರು ಕೇಳಿದ್ದೇವೆ. ನಮಗೆ ಕೊಟ್ಟಿದ್ದು 13.46 ಟಿಎಂಸಿ, ನಾವು ಹೆಚ್ಚು ನೀರು ಪಡೆಯಲು ಟ್ರಿಬ್ಯುನಲ್ ಎದುರು ಹೋರಾಟ ಮಾಡಲೇಬೇಕು ಎಂದರು.
ಬಿಜೆಪಿಗೆ ಕೋನರಡ್ಡಿ ತಿರುಗೇಟು:ಡಿಸಿಎಂ ಡಿ.ಕೆ. ಶಿವಕುಮಾರ್ ಮೇಲೆ ಬಿಜೆಪಿಯ ಕಮಿಷನ್ ಆರೋಪಕ್ಕೆ ಬಿಜೆಪಿಗೆ ಕೋನರೆಡ್ಡಿ ತಿರುಗೇಟು ನೀಡಿದರು. ''ನಾವು ಅಧಿಕಾರಕ್ಕೆ ಬಂದು ಎರಡು ತಿಂಗಳಾಗಿದೆ. ಇನ್ನು ಯಾವ ಟೆಂಡರ್ ಇಲ್ಲಾ, ಏನು ಇಲ್ಲಾ.. ಬಿಜೆಪಿ ಅಪವಾದ ಎದುರಿಸಲು ನಾವು ಗಟ್ಟಿ ಇದ್ದೇವೆ. ನೀವು ಬೇಡ ಅಂತಲೇ, ನಿಮ್ಮನ್ನು ಹೊರಗೆ ಹಾಕಿ ನಮಗೆ ಜನ ಅಧಿಕಾರ ಕೊಟ್ಟಿದ್ದಾರೆ. 135 ಜನ ಆರಿಸಿ ಬಂದಿದ್ದೇವೆ. ಡಿಸಿಎಂ ಒಳ್ಳೆಯ ಕೆಲಸ ಮಾಡುವುದಕ್ಕೆ ಬಿಜೆಪಿಗೆ ಹೊಟ್ಟೆ ಕಿಚ್ಚು. ಡಿಸಿಎಂ ಬ್ರ್ಯಾಂಡ್ ಬೆಂಗಳೂರು ಎಂದು ಕೆಲಸ ಮಾಡುತ್ತಿದ್ದಾರೆ. ಕೃಷಿ ಸಚಿವರ ಮೇಲಿನ ಆರೋಪ ಸುಳ್ಳು ಎಂದಾಗಿದೆ. ಅದರ ಬಗ್ಗೆ ಏಕೆ ಚರ್ಚೆ ಮಾಡೊದು ಖೊಟ್ಟಿ ಪತ್ರ ಎಂದು ಕೃಷಿ ಅಧಿಕಾರಿಗಳೇ ಹೇಳಿದ್ದಾರೆ. ಅದಕ್ಕೆ ನಾನು ಹೇಳೋದು ಸರಿಯಲ್ಲ'' ಎಂದು ಸಮರ್ಥಿಸಿಕೊಂಡರು.
ಇದನ್ನೂ ಓದಿ:ಮೇಕೆದಾಟು ಪಾದಯಾತ್ರೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ: ಸಿದ್ದು, ಡಿಕೆಶಿ, ಸುರೇಶ್ ವಿರುದ್ಧದ ಪ್ರಕರಣ ಕೈಬಿಡಲು ಸಂಪುಟ ಒಪ್ಪಿಗೆ