ಕರ್ನಾಟಕ

karnataka

ETV Bharat / state

ಮಹದಾಯಿ ವಿವಾದ ಮುಗಿದ ಅಧ್ಯಾಯ: ಸಚಿವ ಜಗದೀಶ್​​ ಶೆಟ್ಟರ್

ಮಹದಾಯಿ ಸಮಸ್ಯೆ ಮುಗಿದ ಅಧ್ಯಾಯ, ಈಗಾಗಲೇ ಗೆಜೆಟ್ ನೋಟಿಫಿಕೇಶನ್ ಕೂಡ ಆಗಿದೆ. ಈಗ ಕೇವಲ ಪರಿಸರ ಇಲಾಖೆ ಮತ್ತು ಅರಣ್ಯ ಇಲಾಖೆಯ ಸಮ್ಮತಿ ಬೇಕಾಗಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಸಚಿವ ಜಗದೀಶ್​​ ಶೆಟ್ಟರ್
ಸಚಿವ ಜಗದೀಶ್​​ ಶೆಟ್ಟರ್

By

Published : Oct 8, 2020, 5:22 PM IST

Updated : Oct 8, 2020, 7:40 PM IST

ಧಾರವಾಡ:ಮಹದಾಯಿ ಸಮಸ್ಯೆ ಮುಗಿದು ಹೋದ ಅಧ್ಯಾಯ. ಈಗಾಗಲೇ ಅದು ಸಹ ನಮ್ಮ ಪರ ಅವಾರ್ಡ್ ಆಗಿದೆ. ಈಗ ಕೇವಲ ಪರಿಸರ ಇಲಾಖೆ ಮತ್ತು ಅರಣ್ಯ ಇಲಾಖೆಯ ಸಮ್ಮತಿ ಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹದಾಯಿ ಸಮಸ್ಯೆ ಮುಗಿದು ಹೋದ ಅಧ್ಯಾಯ. ಈಗಾಗಲೇ ಗೆಜೆಟ್ ನೋಟಿಫಿಕೇಶನ್ ಕೂಡ ಆಗಿದೆ. ಈಗ ಕೇವಲ ಪರಿಸರ ಇಲಾಖೆ ಮತ್ತು ಅರಣ್ಯ ಇಲಾಖೆಯ ಸಮ್ಮತಿ ಬೇಕಾಗಿದೆ ಎಂದರು.

ಮಹದಾಯಿ ವಿವಾದ ಕುರಿತು ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ

ಅಷ್ಟೇ ಅಲ್ಲದೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಸಹ 500 ಕೋಟಿ ರೂಪಾಯಿ ಹಣವನ್ನು ಕಾಮಗಾರಿಗೆ ತೆಗೆದಿಟ್ಟಿದ್ದಾರೆ. ಅನಾವಶ್ಯಕವಾಗಿ ಪ್ರಚೋದನೆ ಮಾಡುವ ಕೆಲಸ ನಡಿತಾ ಇದೆ. ಆದರೆ ಮಹದಾಯಿ ವಿಷಯದಲ್ಲಿ ಕಾನೂನು ರೀತಿಯಾಗಿ ನಾವು ಜಯಶಾಲಿಯಾಗಿದ್ದೇವೆ ಎಂದು ಸಚಿವ ಶೆಟ್ಟರ್​ ಹೇಳಿದ್ರು.

Last Updated : Oct 8, 2020, 7:40 PM IST

ABOUT THE AUTHOR

...view details