ಧಾರವಾಡ :ತಾಲೂಕಿನ ಗೋವನಕೊಪ್ಪ ಗ್ರಾಮದಿಂದ ಮಹಾಬಲೇಶ ಹಾಗೂ ಇನ್ನೋರ್ವನನ್ನು ಸಿಬಿಐ ಅಧಿಕಾರಿಗಳು ಠಾಣೆಗೆ ಕರೆತಂದಿದ್ದು ಯೋಗೇಶ್ ಗೌಡ ಕೊಲೆ ಪ್ರಕರಣದ ಕುರಿತು ವಿಚಾರಣೆ ನಡೆಸಲಿದ್ದಾರೆ.
ಯೋಗೇಶ್ ಗೌಡ ಕೊಲೆ ಪ್ರಕರಣ.. ಮಹಾಬಲೇಶ ಹೊಂಗಲ್ನನ್ನು ಠಾಣೆಗೆ ಕರೆತಂದ ಸಿಬಿಐ - Mahabalesh Hongal took to Dharwad for CBI Inquiry
ಯೋಗೇಶ್ ಗೌಡ ಕೊಲೆ ಪ್ರಕರಣದ ತನಿಖೆ ಭಾಗವಾಗಿ ಅಧಿಕಾರಿಗಳು ಗೋವನಕೊಪ್ಪ ಗ್ರಾಮಕ್ಕೆ ತೆರಳಿದ್ದು, ಪ್ರಕರಣದ ಆರೋಪಿ ಮಹಾಬಲೇಶ ಹೊಂಗಲ್ ಅವರ ಮನೆಗೆ ಹೋಗಿ ಸಿಬಿಐ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ..
ಜಿಪಂ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ತನಿಖೆ ಭಾಗವಾಗಿ ಅಧಿಕಾರಿಗಳು ಗೋವನಕೊಪ್ಪ ಗ್ರಾಮಕ್ಕೆ ತೆರಳಿದ್ದ ಸಿಬಿಐ ಅಧಿಕಾರಿಗಳು ಯೋಗೇಶ್ ಗೌಡ ಕೊಲೆ ಪ್ರಕರಣದ ಆರೋಪಿ ಮಹಾಬಲೇಶ ಹೊಂಗಲ್ ಅವರ ಮನೆಗೆ ಹೋಗಿ ಮಾಹಿತಿ ಕಲೆ ಹಾಕಿದರು. ಪ್ರಕರಣದಲ್ಲಿ ಈ ಹಿಂದೆ ಬಂಧಿತನಾಗಿದ್ದ ಮಹಾಬಲೇಶ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.
ಬೆಳಗ್ಗೆಯಿಂದ ಮಾಜಿ ಸಚಿವ ವಿನಯ ಕುಲಕರ್ಣಿ ಸಹೋದರ ವಿಜಯ್ ಕುಲಕರ್ಣಿ ಹಾಗೂ ಸೋದರ ಮಾವ ಚಂದ್ರಶೇಖರ ಇಂಡಿ, ಕೊಲೆ ಪ್ರಕರಣದ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ಅವರನ್ನು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದ ಸಿಬಿಐ ಅಧಿಕಾರಿಗಳು ಮಧ್ಯಾಹ್ನದ ನಂತರ ಗೋವನಕೊಪ್ಪ ಗ್ರಾಮಕ್ಕೆ ತೆರಳಿ ವಿಚಾರಣೆ ನಡೆಸಿದ್ದಾರೆ. ಸದ್ಯ ಮಹಾಬಲೇಶ ಹಾಗೂ ಇನ್ನೋರ್ವನನ್ನು ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.