ಕರ್ನಾಟಕ

karnataka

ETV Bharat / state

ಕೊರೊನಾ ನಿಯಂತ್ರಣಕ್ಕೆ ಬಂದ್ರೆ ಕೃಷಿ ವಿವಿಯ ಖಾಲಿ ಹುದ್ದೆಗಳ ನೇಮಕ: ಎಂ.ಬಿ.ಚೆಟ್ಟಿ - Dharwad Agriculture VV Chancellor talk about vacant post

ರೆಗ್ಯುಲರ್ ಶಿಕ್ಷಕರ ಹುದ್ದೆಗಳು ಖಾಲಿಯಿರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ವಿಷಯದ ಮೇಲೂ ಪ್ರಭಾವ ಬೀರುತ್ತಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಂ.ಬಿ.ಚೆಟ್ಟಿ ತಿಳಿಸಿದರು.

Dharwad Agriculture VV
ಧಾರವಾಡ ಕೃಷಿ ವಿಶ್ವವಿದ್ಯಾಲಯ

By

Published : Oct 23, 2020, 3:36 PM IST

ಧಾರವಾಡ: ವಿಶ್ವವಿದ್ಯಾಲಯದಲ್ಲಿ ಶೇ 60ರಷ್ಟು ಶಿಕ್ಷಕೇತರ ಹಾಗೂ ಶೇ 30-35ರಷ್ಟು ಶಿಕ್ಷಕ ಹುದ್ದೆಗಳು ಖಾಲಿ ಇವೆ. ಹೀಗಾಗಿ, ವಿವಿಯ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಕುಲಪತಿ ಎಂ.ಬಿ.ಚೆಟ್ಟಿ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, 595 ಶಿಕ್ಷಕರ ಹುದ್ದೆಗಳಲ್ಲಿ 218, 1,074 ಶಿಕ್ಷಕೇತರ ಹುದ್ದೆಗಳಲ್ಲಿ 645 ಹುದ್ದೆಗಳು ಖಾಲಿಯಿವೆ. ಬೋಧಕರ ಹುದ್ದೆಗಳು ಖಾಲಿಯಿರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ. ಆ ಸಮಸ್ಯೆಯನ್ನು ಹೋಗಲಾಡಿಸಲು ಗುತ್ತಿಗೆ ಆಧಾರದ ಮೇಲೆ ಅವಶ್ಯಕತೆಗೆ ಅನುಗುಣವಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಂ.ಬಿ.ಚೆಟ್ಟಿ

ನಾನ್ ಟೀಚಿಂಗ್‌ ವಿಭಾಗದಲ್ಲೂ ಸಹ ಸಾಕಷ್ಟು ಹುದ್ದೆಗಳು ಖಾಲಿಯಿದ್ದು, ವಿವಿಧ ವಿಭಾಗಗಳಲ್ಲಿ ಕೆಲಸ ನಿರ್ವಹಿಸುವವರನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಂಡು ಕೆಲಸ ನಡೆಸಲಾಗುತ್ತಿದೆ. ಬೋಧಕ ಮತ್ತು ಬೋಧಕೇತರ ಹುದ್ದೆಗಳು ಖಾಲಿಯಿರುವುದರಿಂದ ಕೃಷಿ ವಿವಿಗೆ ಹಾಗೂ ಬೇರೆ ಬೇರೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ತೊಂದರೆಯುಂಟಾಗಿದೆ ಎಂದು ಹೇಳಿದರು.

ಕೊರೊನಾ ಸಂದಿಗ್ಧ ಸ್ಥಿತಿಯಲ್ಲಿ ವಿವಿಯಲ್ಲಿ ಖಾಲಿ ನೇಮಕಾತಿ ಮಾಡಿಕೊಳ್ಳದಂತೆ ಸರ್ಕಾರ ಸೂಚಿಸಿತ್ತು. ಈ ಬಗ್ಗೆ ಸರ್ಕಾರ ಅನುಮತಿ ನೀಡಿದ ಬಳಿಕ ಎಲ್ಲಾ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ವಿವಿ ತೀರ್ಮಾನಿಸಿದೆ ಎಂದು ಅವರು ಸ್ಪಷ್ಟನೆ ಕೊಟ್ಟರು.

For All Latest Updates

TAGGED:

ABOUT THE AUTHOR

...view details