ಕರ್ನಾಟಕ

karnataka

ETV Bharat / state

ಕೈ ಪಾಳಯದಲ್ಲೂ ಭಿನ್ನಮತದ ಹೊಗೆ: ನಿಷ್ಠಾವಂತ ಕಾರ್ಯಕರ್ತರ ಆಕ್ರೋಶ ಹೀಗಿದೆ

ಬಿಜೆಪಿಯ ಮುಸುಕಿನ ಗುದ್ದಾಟದ ಬೆನ್ನಲ್ಲೆ ಕೈ ಪಾಳಯೆದಲ್ಲೂ ಭಿನ್ನಮತದ ಹೊಗೆ ಶುರುವಾಗಿದೆ. ನಿಷ್ಠಾವಂತ ಕಾರ್ಯಕರ್ತರನ್ನು‌ ಕಡೆಗಣಿಸಲಾಗುತ್ತಿದೆ ಎಂದು ಕೈ ನಾಯಕರು ಅಸಮಾಧಾನ ಹೊರ ಹಾಕಿದ್ದಾರೆ.

Dissent in Congress party
ಸಂಗ್ರಹ ಚಿತ್ರ

By

Published : Jun 1, 2020, 6:55 PM IST

ಹುಬ್ಬಳ್ಳಿ: ಕುಂದಗೋಳ ಕಾಂಗ್ರೆಸ್​ನ ವಿಧಾನಸಭಾ ಕ್ಷೇತ್ರದಲ್ಲಿ ಭಿನ್ನಮತದ ಹೊಗೆಯಾಡುತ್ತಿದೆ. ಇಲ್ಲಿನ ನಿಷ್ಠಾವಂತ ಕಾರ್ಯಕರ್ತರನ್ನು‌ ಕಡೆಗಣಿಸಲಾಗುತ್ತಿದೆ ಎಂದು ಕೆಲ ಕಾಂಗ್ರೆಸ್​ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ

ಮಾಜಿ ಸಚಿವ ದಿ. ಸಿ.ಎಸ್. ಶಿವಳ್ಳಿ ನಿಧನದ ಬಳಿಕ ಪ್ರಾಮಾಣಿಕ ಕಾರ್ಯಕರ್ತರನ್ನ ಕಡೆಗಣಿಸಿಲಾಗುತ್ತಿದೆ. ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾಮಾಣಿಕತೆಗೆ ಬೆಲೆ ಇಲ್ಲ. ಲೂಟಿಕೋರರಿಗೆ ಮಾತ್ರ ಜಾಗ ನೀಡಲಾಗುತ್ತಿದೆ. ಸಿ.ಎಸ್. ಶಿವಳ್ಳಿ ಸಾವಿನ ಬಳಿಕ ಕುಂದಗೋಳ ವಿಧಾನಸಭಾ ಕ್ಷೇತ್ರ ಅನಾಥವಾಗಿದೆ. ಸಿ.ಎಸ್. ಶಿವಳ್ಳಿ ಯಾವ ಅನ್ಯಾಯವನ್ನ ವಿರೋಧಿಸುತ್ತಿದ್ದರೋ ಅದೇ ಇಂದು ತಾಂಡವವಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಶಾಸಕಿ ಕುಸುಮಾವತಿ ಶಿವಳ್ಳಿ

ಶಿವಳ್ಳಿ ಅವರು ಬೆಳೆಸಿದ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದೆ. ಪ್ರಾಮಾಣಿಕತೆಗೆ ಬೆಲೆ ಇಲ್ಲದಂತಾಗಿದೆ. ಶಿವಳ್ಳಿ ಅನೇಕ ಕಾರ್ಯಕರ್ತರನ್ನ ಅನಾಥರನ್ನಾಗಿ ಮಾಡಿದ್ರು. ಶಿವಳ್ಳಿಯವರು ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಶಿವಳ್ಳಿಯವರಿಗೆ ಶಿವಳ್ಳಿ ಅವರೇ ಸಾಟಿ ಎಂಬ‌ ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ

ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಇಷ್ಟೊಂದು ಬೆಳವಣಿಗೆಗಳು ನಡೆಯುತ್ತಿದ್ದರೂ ಧಾರವಾಡ ಜಿಲ್ಲಾ ಕಾಂಗ್ರೆಸ್ ಮುಖಂಡರು ಮೌನ ವಹಿಸಿದ್ದಾರೆ. ಅನೇಕ ವಾಟ್ಸ್​​ಆ್ಯಪ್​​​​ ಗ್ರೂಪ್​​ಗಳಲ್ಲಿ ಜಿಲ್ಲಾಧ್ಯಕ್ಷರು ಇದ್ದಾರೆ. ಆದ್ರೆ, ಅಸಮಾಧಾನಗೊಂಡ ಕಾರ್ಯಕರ್ತರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆ ಬಗೆಹರಿಸುವದನ್ನ ಬಿಟ್ಟು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇದಲ್ಲದೇ ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ ಅವರ ವಿರುದ್ಧವು ಕಾರ್ಯಕರ್ತರ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಕೊರೊನಾ ಸಂದರ್ಭದಲ್ಲಿ ಶಾಸಕಿ ಸ್ಪಂದಿಸುತ್ತಿಲ್ಲ ಎಂಬ ಗಂಭೀರ ಆರೋಪ ಮಾಡಿದ್ದು, ಕಾಂಗ್ರೆಸ್​ ಪಕ್ಷದ ಕಾರ್ಯಕರ್ತರ ಆಂತರಿಕ ವಿಚಾರ ಈಗ ಹಾದಿಬೀದಿ ರಂಪವಾಗಿ ಮಾರ್ಪಟ್ಟಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ

ABOUT THE AUTHOR

...view details