ಕರ್ನಾಟಕ

karnataka

ETV Bharat / state

ಪ್ರೇಮಿಗಳ ರಿಜಿಸ್ಟರ್ ಮದುವೆ ಬಳಿಕ ಯುವತಿ ಮನೆಯವರ ವಿರೋಧ, ಯುವಕನ ಮೇಲೆ ಮಾರಣಾಂತಿಕ‌ ಹಲ್ಲೆ - ಶಿವನಗೌಡ ಪಾಟೀಲ ಮತ್ತು ಅಕ್ಕಮ್ಮ ಎಂಬ ಪ್ರೇಮಿಗಳು

ಕಲಘಟಗಿ ತಾಲೂಕು ಲಿಂಗನಕೊಪ್ಪದ ಇಬ್ಬರು ಪ್ರೇಮಿಗಳು ಮೂರು ವರ್ಷದಿಂದ ಪ್ರೀತಿಸುತ್ತಿದ್ದರು. ಇವರ ಮದುವೆಗೆ ಹುಡುಗಿ ಮನೆಯವರ ಒಪ್ಪಿಗೆ ಇರಲಿಲ್ಲ. ಆದರೂ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದರು.

assaulted lover
ಪ್ರಿಯತಮೆ ಮನೆಯವರಿಂದ ಹಲ್ಲೆಗೊಳಗಾದ ಪ್ರಿಯಕರ

By

Published : Jun 15, 2023, 9:44 PM IST

ಯುವಕನ ಮೇಲೆ ಮಾರಣಾಂತಿಕ‌ ಹಲ್ಲೆ

ಧಾರವಾಡ: ಪ್ರೇಮಿಗಳ ರಿಜಿಸ್ಟರ್ ಮದುವೆಯ ಬಳಿಕ ಹುಡುಗ ಮತ್ತು ಹುಡುಗಿ ಮನೆಗೆ ಹೋಗಿದ್ದು ಹುಡುಗಿಯ ಮನೆಯವರು ತೀವ್ರವಾಗಿ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಕಲಘಟಗಿ ತಾಲೂಕಿನ ಲಿಂಗನಕೊಪ್ಪ ಗ್ರಾಮದಲ್ಲಿ ನಡೆದಿದೆ. ಹುಡುಗಿ ಮನೆಯವರ ಹಲ್ಲೆಯಿಂದ ಗಾಯಗೊಂಡಿರುವ ಶಿವನಗೌಡ ಪಾಟೀಲ್ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯತ್ತಿರುವನು.

ಕಲಘಟಗಿ ತಾಲೂಕಿನ ಲಿಂಗನಕೊಪ್ಪದ ಒಂದೇ ಗ್ರಾಮದ ಶಿವನಗೌಡ ಪಾಟೀಲ ಮತ್ತು ಅಕ್ಕಮ್ಮ ಮೂರು ವರ್ಷದಿಂದ ಪ್ರೀತಿಸುತ್ತಿದ್ದರು. ಇವರ ಮದುವೆಗೆ ಹುಡುಗಿ ಮನೆಯವರ ಒಪ್ಪಿಗೆ ಇರಲಿಲ್ಲ. ಆದರೂ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದಾರೆ. ನಿನ್ನೆ ರಾತ್ರಿ ಅಕ್ಕಮ್ಮನನ್ನು ಕರೆಯಲು ಶಿವನಗೌಡ ಹೋಗಿದ್ದು ಆಕೆಯ ಮನೆಯವರು ಹಲ್ಲೆ ಮಾಡಿದ್ದಾರೆ ಎಂದು ಹುಡುಗನ ಕಡೆಯವರು ಆರೋಪಿಸಿದ್ದಾರೆ.

ಮೇ 31ರಂದು ಕಲಘಟಗಿ ರಿಜಿಸ್ಟರ್ ಆಫೀಸ್‌ನಲ್ಲಿ‌ ಮದುವೆ ಮಾಡಿಕೊಂಡಿದ್ದೆವು. ಬಳಿಕ ತನ್ನ ಮನೆಗೆ ಹೋಗಿದ್ದ ಅಕ್ಕಮ್ಮನನ್ನು ಕರೆಯಲು ಹೋಗಿದ್ದೆ. ಹುಡುಗಿ ಮನೆಯವರು ಕಣ್ಣಿಗೆ ಕಾರದ ಪುಡಿ ಎರಚಿ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದರು ಎಂದು ಶಿವನಗೌಡ ಹೇಳಿದ್ದಾರೆ.

ಕಲಘಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹುಡುಗಿ ಮನೆಯಲ್ಲಿ ಪೊಲೀಸ್ ಇಲಾಖೆ ಹಾಗೂ ಸೇನೆಯಲ್ಲಿ ಕೆಲಸ ಮಾಡುವವರಿದ್ದಾರೆ. ಹೀಗಾಗಿ ಕಲಘಟಗಿ ಠಾಣೆಯಲ್ಲಿ ನನ್ನ ದೂರು ತೆಗೆದುಕೊಳ್ಳುತ್ತಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊರೆ ಹೋಗುತ್ತೇನೆ ಎಂದು ಶಿವನಗೌಡ ತಿಳಿಸಿದ್ದಾರೆ.

ನಮ್ಮ ಮನೆಯಲ್ಲೂ ಹೇಳಿಲ್ಲ, ಆ ಹುಡುಗಿ ಅವರ ಮನೆಯಲ್ಲೂ ತಿಳಿಸಿಲ್ಲ. ಇಬ್ಬರೂ ರಿಜಿಸ್ಟರ್ ಮದುವೆ ಆಗಿದ್ದರು. ಈಗ ಆ ಹುಡುಗಿ ಅಪ್ಪ ಅಮ್ಮ ಹೆದರಿಸಿದ್ದಕ್ಕೆ ನಾ ಒಲ್ಲೆ ಎನ್ನುತ್ತಿದ್ದಾಳೆ. ಆದರೆ ಈತ ಅವಳು ಬೇಕಂತ ಕುಂತನಾ. ಈತ ಹೇಳಿದಂಗ ನಾವು ಮದುವೆಗೆ ಒಪ್ಪಿದ್ದು, ಆದ್ರ ಹುಡುಗಿ ಈಗ ಒಪ್ಪುತ್ತಿಲ್ಲ. ಇವರಿಬ್ಬರು ಮದುವೆ ಆಗಿದ್ದ ನಮಗೂ ಗೊತ್ತಿಲ್ಲರೀ. ರಿಜಿಸ್ಟರ್ ಮದುವೆ ಮಾಡಿಕೊಂಡ ಮೂರು ದಿನ ಆಗಿದ್ದ ಬಳಿಕ ಇದು ಗೊತ್ತಾಗಿದೆ. ಇದನ್ನೆಲ್ಲ ಬಿಡು, ಬೆಂಗಳೂರಿಗೆ ಹೋಗು ಅಂತ ಹೇಳಿದ್ವಿ. ಆದರ ಬೆಂಗಳೂರಿಗೆ ಹೋಗಿದ್ದ, ಆದ್ರ ಹುಡುಗಿ ಮೇಸೇಜ್ ಮಾಡಿದ್ದಕ್ಕೆ ಕರೆಯಲಿಕ್ಕೆ ಹೋಗಿದ್ದಾಗ ಈತನನ್ನು ಮನೆಯವರು ಹೊಡೆದಾರಿ ಎಂದು ಹಲ್ಲೆಗೊಳಗಾದವನ ಸಂಬಂಧಿ ನಿರ್ಮಲಾ ಪಾಟೀಲ್ ಹೇಳಿದರು.

ವ್ಯಕ್ತಿ ಹತ್ಯೆ- ಪೊಲೀಸರು ತನಿಖೆ:ವ್ಯಕ್ತಿಯನ್ನು ಹತ್ಯೆಗೈದ ದುಷ್ಕರ್ಮಿಗಳು ಕೆರೆ ಹತ್ತಿರ ಶವ ಬಿಸಾಕಿ ಹೋಗಿರುವ ಘಟನೆ ನಗರದ ಅನಗೋಳದಲ್ಲಿ ನಡೆದಿದೆ. ಅನಗೋಳದ ಹೊರ ವಲಯದ ಕೆರೆ ಹತ್ತಿರ ಶವ ಪತ್ತೆಯಾಗಿದೆ. ಕೃಷಿ ಕೆಲಸಕ್ಕೆ ಹೊರಟಿದ್ದ ರೈತರು ಮೃತದೇಹ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದ ಸಂಜಯ್ ತುಕಾರಾಮ್ ಪಾಟೀಲ (34) ಕೊಲೆಗೀಡಾದ ವ್ಯಕ್ತಿ. ಮೃತದೇಹ ಪತ್ತೆಯಾದ ಸ್ಥಳಕ್ಕೆ ಟಿಳಕವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂಓದಿ:ಜಮ್ಮು ಕಾಶ್ಮೀರದ ಶಾಲೆಯಲ್ಲಿ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ; ಶಿಕ್ಷಕನ ಬಂಧನ

ABOUT THE AUTHOR

...view details