ಹುಬ್ಬಳ್ಳಿ:ಮದರಂಗಿ, ಚಾರ್ಲಿ, ರುದ್ರತಾಂಡವ, ಹುಚ್ಚ-2 ಹೀಗೆ ವಿಭಿನ್ನ ಚಿತ್ರಗಳಲ್ಲಿ ನಾಯಕ ಕೃಷ್ಣ ಅಭಿನಯಿಸಿದ್ದು, ಈಗ ಅವರೇ ನಿರ್ಮಾಣ ಮಾಡಿರುವ ಚಿತ್ರ ಲವ್ ಮಾಕ್‍ಟೆಲ್ ಸಿನಿಮಾ ರಾಜ್ಯಾದ್ಯಂತ ಇದೇ 31ರಂದು ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ಮಾಪಕಿ ಮಿಲನ್ ನಾಗರಾಜ್ ಹೇಳಿದರು.
'ಲವ್ ಮಾಕ್‍ಟೆಲ್' ಚಿತ್ರತಂಡದ ಪತ್ರಿಕಾಗೋಷ್ಠಿ ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮದರಂಗಿ ಚಿತ್ರದ ಡಾರ್ಲಿಂಗ್, ಡಾರ್ಲಿಂಗ್ ಹಾಡಿನ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಈಗ ಕೃಷ್ಣ ಲವ್ ಮಾಕ್‍ಟೆಲ್ ಎನ್ನುವ ಚಿತ್ರಕ್ಕೆ ನಾಯಕನಾಗಿ ಅಭಿನಯಿಸುವುದರ ಜೊತೆಗೆ ಇದೇ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಕೂಡ ಹೇಳಿದ್ದಾರೆ. ನಾಯಕನ ಜೀವನದ ಹಲವಾರು ವಿಭಿನ್ನವಾದ ರೀತಿಯ ಸನ್ನಿವೇಶ ಹಾಗೂ ಲವ್ ಸ್ಟೋರಿಗಳನ್ನು ಈ ಚಿತ್ರದಲ್ಲಿ ಹೇಳಲಾಗಿದ್ದು, ಕೊನೆಗೆ ಯಾವ ಪ್ರೀತಿ ನಾಯಕನಿಗೆ ಉಳಿಯುತ್ತದೆ ಎಂಬ ಕಥಾ ಹಂದರದಲ್ಲಿ ಚಿತ್ರ ಮೂಡಿಬಂದಿದೆ.
ಈ ಚಿತ್ರಕ್ಕೆ ರಘು ದೀಕ್ಷಿತ್ ರಾಗ ಸಂಯೋಜನೆ ಮಾಡಿದ್ದು, ಈಗಾಗಲೇ ಚಿತ್ರದ ಟ್ರೈಲರ್, ಲಿರಿಕಲ್ ಸಾಂಗ್ ಅತಿ ಹೆಚ್ಚು ವೀಕ್ಷಣೆ ಗಳಿಸಿದೆ. ಇದೇ ತಿಂಗಳ 31ಕ್ಕೆ ಲವ್ ಮಾಕ್‍ಟೆಲ್ ಚಿತ್ರ ರಾಜ್ಯಾದ್ಯಂತ ತೆರೆಗೆ ಬರಲಿದೆ ಎಂದರು.
ಬಳಿಕ ನಟ ಕೃಷ್ಣ ಮಾತನಾಡಿ, ಈ ಹಿಂದೆ ಮಾಡಿರುವ ಚಿತ್ರಕ್ಕಿಂತ ಈ ಚಿತ್ರ ವಿಭಿನ್ನವಾಗಿದೆ. ಈ ಚಿತ್ರ ಮನೋರಂಜನೆ ನೀಡುತ್ತದೆ. ಎಲ್ಲರ ಜೀವನದಲ್ಲಿ ಬರುವಂತಹ ಸನ್ನಿವೇಶಗಳನ್ನು ಆಧರಿಸಿ ಸಿನಿಮಾ ಮಾಡಲಾಗಿದೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿಕೊಂಡ್ರು.
ಚಿತ್ರಕ್ಕೆ ಕೃಷ್ಣ ಅವರು ಸಂಭಾಷಣೆ, ನಿರ್ದೇಶನ ಮಾಡಿದ್ದು, ಛಾಯಾಗ್ರಹಣ ಕ್ರೇಜಿ ಮೈಂಟ್ಸ್ ಮಾಡಿದ್ದಾರೆ. ಕೃಷ್ಣ, ಮಿಲನ ನಾಗರಾಜ್, ಅಮೃತ ಅಯ್ಯಂಗಾರ್, ರಚನಾ ಸೇರಿದಂತೆ ದೊಡ್ಡ ತಾರಾಗಣವೇ ಸಿನಿಮಾದಲ್ಲಿದ್ದು, ಕಿಚ್ಚ ಸುದೀಪ್ ಅವರು ಬ್ಯಾಂಗ್ರೌಂಡ್ ಧ್ವನಿ ನೀಡಿರುವುದು ಸಿನಿಮಾದ ಮತ್ತೊಂದು ವಿಶೇಷವಾಗಿದೆ.