ಕರ್ನಾಟಕ

karnataka

ETV Bharat / state

ಅತಿವೃಷ್ಟಿಯಿಂದ 388 ಕೋಟಿ ರೂಪಾಯಿ ಬೆಳೆಹಾನಿ: ಜಿಲ್ಲಾಧಿಕಾರಿ - hubli latest news

ನಗರದ ಡೆನ್ನಿಸನ್ ಹೋಟೆಲ್​ನಲ್ಲಿ ಕೇಂದ್ರದ ಅಂತರ್ ಸಚಿವಾಲಯ ಅತಿವೃಷ್ಟಿ ಅಧ್ಯಯನ ತಂಡ ಸಭೆ ನಡೆಸಿ ಅತಿವೃಷ್ಟಿಯಿಂದಾದ ಹಾನಿ ಬಗ್ಗೆ ಮಾಹಿತಿ ಕಲೆಹಾಕಿತು.

ಅಂತರ್ ಸಚಿವಾಲಯ ಅತಿವೃಷ್ಟಿ ಅಧ್ಯಯನ ತಂಡ ಸಭೆ
ಅಂತರ್ ಸಚಿವಾಲಯ ಅತಿವೃಷ್ಟಿ ಅಧ್ಯಯನ ತಂಡ ಸಭೆ

By

Published : Sep 9, 2020, 1:27 AM IST

ಹುಬ್ಬಳ್ಳಿ: ಅಗಸ್ಟ್ ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ 388 ಕೋಟಿ ರೂಪಾಯಿ ಬೆಳೆಹಾನಿ ಹಾಗೂ 582 ಕೋಟಿ ರೂಪಾಯಿ ಸಾರ್ವಜನಿಕ ಆಸ್ತಿ ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು.

ನಗರದ ಡೆನ್ನಿಸನ್ ಹೋಟೆಲ್​ನಲ್ಲಿ ಜರುಗಿದ ಕೇಂದ್ರದ ಅಂತರ್ ಸಚಿವಾಲಯ ಅತಿವೃಷ್ಟಿ ಅಧ್ಯಯನ ತಂಡ ಸಭೆಯಲ್ಲಿ ಮಾತನಾಡಿದರು.ಕಳೆದ ವರ್ಷವೂ ನೆರೆ ಬಂದು ಅಪಾರ ಪ್ರಮಾಣದ ಹಾನಿ ಉಂಟಾಗಿತ್ತು.‌ ಈ ಬಾರಿಯೂ ವಾಡಿಕೆಯಿಂತ ಹೆಚ್ಚಿನ ಮಳೆಯಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ 2 ಮನೆಗಳು ಸಂಪೂರ್ಣವಾಗಿ, 25 ಮನೆಗಳು ಭಾಗಶಃ, 1200 ಮನೆಗಳು ಅಲ್ಪ ಪ್ರಮಾಣದಲ್ಲಿ ಹಾನಿಗೀಡಾಗಿವೆ. ಎನ್.ಡಿ.ಆರ್.ಎಫ್ ನಿಯಮಾನುಸಾರ ಮನೆಗಳಿಗೆ ಪರಿಹಾರ ಧನ ವಿತರಿಸಲಾಗುತ್ತಿದೆ. 55970 ಹೆಕ್ಟೇರ್​ ಕೃಷಿ ಬೆಳೆ, 6635 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂಬಿತ್ಯಾದಿ ಮಾಹಿತಿ ನೀಡಿದರು.

ಸಭೆಯಲ್ಲಿ ಕೇಂದ್ರ ಕೃಷಿ ಹಾಗೂ ರೈತರ ಸಹಕಾರ ಮಾರುಕಟ್ಟೆ ಮಂತ್ರಾಲಯದ ಎಣ್ಣೆಬೀಜ ಅಭಿವೃದ್ಧಿ ನಿರ್ದೇಶಕ ಡಾ.ಮನೋಹರನ್,ಕೇಂದ್ರ ಜಲಶಕ್ತಿ ಮಂತ್ರಾಲಯದ ಅಧೀಕ್ಷಕ ಇಂಜಿನಿಯರ್ ಗುರುಪ್ರಸಾದ್ ಜೆ, ರಾಜ್ಯ ಕಂದಾಯ ಇಲಾಖೆಯ ಕೆಎಸ್ ಡಿ ಎಂ ಎ ವಿಭಾಗೀಯ ವ್ಯವಸ್ಥಾಪಕ ಡಾ.ಜೆ‌.ಎಸ್.ಶ್ರೀನಿವಾಸರೆಡ್ಡಿ ಸೇರಿದಂತೆ ಹಲವರು ಇದ್ದರು.

ABOUT THE AUTHOR

...view details