ಹುಬ್ಬಳ್ಳಿ(ಧಾರವಾಡ):ಲಾರಿ ಹಾಗೂ ಟಾಟಾ ಏಸ್ ವಾಹನ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡುರುವ ಘಟನೆ ನವಲಗುಂದ ತಾಲ್ಲೂಕಿನ ಕರ್ಲವಾಡದ ಬಳಿ ನಡೆದಿದೆ.
ಲಾರಿ-ಟಾಟಾ ಏಸ್ ಡಿಕ್ಕಿ: ಓರ್ವ ಸಾವು, ಇಬ್ಬರು ಗಂಭೀರ - Larry-Tata Ace collided
ಲಾರಿ ಹಾಗೂ ಟಾಟಾ ಏಸ್ ವಾಹನ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡುರುವ ಘಟನೆ ನವಲಗುಂದ ತಾಲ್ಲೂಕಿನ ಕರ್ಲವಾಡದ ಬಳಿ ನಡೆದಿದೆ.
ಹುಬ್ಬಳ್ಳಿಯಿಂದ ಹೊರಟ ಲಾರಿಯು ನವಲಗುಂದ ಕಡೆಯಿಂದ ಬರುತ್ತಿದ್ದ ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಟಾಟಾ ಏಸ್ ವಾಹನದ ಕ್ಲೀನರ್ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಇನ್ನೂ ಗಂಭೀರ ಗಾಯಗೊಂಡವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಾರಿ ಡಿಕ್ಕಿ ಹೊಡೆದ ರಬಸಕ್ಕೆ ಕ್ಲೀನರ್ ಟಾಟಾ ಏಸ್ ವಾಹನದಲ್ಲಿ ಸಿಲುಕಿಕೊಂಡಿದ್ದು ಹೊರತಗೆಯಲು ಪೊಲೀಸರು ಹರಸಾಹಸ ಪಡುವಂತಾಗಿದೆ. ಟಾಟಾ ಏಸ್ ವಾಹನ ಹುಬ್ಬಳ್ಳಿಯ ಅಭಿಷೇಕ ಇಜಾರೆ ಅವರಿಗೆ ಸೇರಿದ್ದಾಗಿದ್ದು, ಇನ್ನೂ ಮೃತ ಯುವಕನ ಗುರುತು ಪತ್ತೆಯಾಗಿಲ್ಲ. ಈ ಸಂಬಂಧ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.