ಕರ್ನಾಟಕ

karnataka

ETV Bharat / state

ಲಾರಿ ಓವರ್​ಟೇಕ್​ ಮಾಡಿದ್ದೇ ತಪ್ಪಾಯ್ತಾ.. ಟಿಪ್ಪರ್​ ಚಾಲಕನನ್ನೇ ಕೊಂದ ಲಾರಿ ಡ್ರೈವರ್​ - ಲಾರಿಯನ್ನು ಓವರ್​ಟೇಕ್​ ಮಾಡಿದ್ದೇ ತಪ್ಪಾಯ್ತಾ

ಲಾರಿಯನ್ನು ಓವರ್​ಟೇಕ್​ ಮಾಡಿ ಮುಂದೆ ಹೋದ ಎಂದು ಲಾರಿ ಚಾಲಕ ಟಿಪ್ಪರ್​ ಚಾಲಕನನ್ನು ರಾಡ್​ನಿಂದ ಹೊಡೆದು ಕೊಲೆ ಮಾಡಿದ್ದಾನೆ.

Lorry driver killed the tipper driver
ಲಾರಿ ಓವರ್ ಟೇಕ್ ಮಾಡಿದ ಎಂದು ಟಿಪ್ಪರ ಚಾಲಕನನ್ನೇ ಕೊಂದ ಡ್ರೈವರ್​

By

Published : Mar 9, 2023, 7:36 PM IST

ಹುಬ್ಬಳ್ಳಿ:ಲಾರಿ ಓವರ್ ಟೇಕ್ ಮಾಡಿದ ಎಂಬ ಕಾರಣಕ್ಕೆ ಲಾರಿ ಚಾಲಕನೋರ್ವ ಟಿಪ್ಪರ ಚಾಲಕನನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ ಘಟನೆ ನಗರದ ಹೊರವಲಯದ ಗಾಮನಗಟ್ಟಿಯ ವಿಮಾನ ನಿಲ್ದಾಣ ಮಾರ್ಗದ ಕಲ್ಕಿ ಬಡಾವಣೆಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯ ಮಹೇಶ ಮಾಲಿ ಪಾಟೀಲ್​(27) ಹತ್ಯೆಯಾದ ಟಿಪ್ಪರ್ ಚಾಲಕನಾಗಿದ್ದಾನೆ.

ಟಿಪ್ಪರ್ ಚಾಲಕ ವಿಶ್ವನಾಥ ಲಾರಿಯೊಂದನ್ನು ಓವರ್ ಟೇಕ್ ಮಾಡಿದ್ದಾರೆ. ಇದರಿಂದ ಕೋಪಗೊಂಡು ಲಾರಿ ಚಾಲಕ ಟಿಪ್ಪರ್ ತಡೆದು ನಿಲ್ಲಿಸಿದ್ದಾನೆ. ನಂತರ ಇಬ್ಬರ ನಡುವೆ ಜಗಳವಾಗಿದೆ. ಈ ಸಂದರ್ಭದಲ್ಲಿ ಲಾರಿ ಚಾಲಕ ಟಿಪ್ಪರ ಚಾಲಕ ಮಾಲಿ ಪಾಟೀಲ್ ಮೇಲೆ ಹಲ್ಲೆ ನಡೆಸಿದಲ್ಲದೇ ರಾಡ್​ನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಸ್ಥಳೀಯರ ಗಮನಕ್ಕೆ ಬರುತ್ತಿದ್ದಂತೆ, ಆರೋಪಿ ತಪ್ಪಿಸಿಕೊಂಡಿದ್ದಾನೆ. ಪ್ರತ್ಯಕ್ಷದರ್ಶಿಗಳು 112 ನಂಬರ್​ಗೆ ಕರೆ ಮಾಡಿ ತಿಳಿಸಿದ್ದಾರೆ. ಆರೋಪಿ ಪತ್ತೆಗೆ ಎಸಿಪಿ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ಶೀಘ್ರ ಪತ್ತೆ ಹಚ್ಚಲಾಗುವುದು ಎಂದು ಡಿಸಿಪಿ ರಾಜೀವ್ ಎಂ. ತಿಳಿಸಿದ್ದಾರೆ. ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:IAS​ ಅಧಿಕಾರಿಯನ್ನೇ ಕೂಡಿಹಾಕಿ ಥಳಿಸಿ ಮುಚ್ಚಳಿಕೆ ಪತ್ರ ಬರೆಸಿಕೊಂಡ ಮೀನುಗಾರರು!

ಮಹಿಳೆಯನ್ನು ಥಳಿಸಿ ಕೊಂದ ಯುವಕರು: ಜಾರ್ಖಂಡ್​ನ ಗೊಡ್ಡಾ ಜಿಲ್ಲೆಯಲ್ಲಿ ನಿನ್ನೆ ಹೋಳಿ ಆಚರಣೆ ವೇಳೆ ಒಂದು ದುರ್ಘಟನೆಯೊಂದು ನಡೆದಿದೆ. 65 ವರ್ಷದ ಮಹಿಳೆಯೊಬ್ಬರನ್ನು ಯುವಕರ ಗುಂಪೊಂದು ಥಳಿಸಿ ಕೊಂದಿರುವ ಘಟನೆ ನಡೆದಿದೆ. ಹೋಳಿ ಆಚರಣೆ ವೇಳೆ ಬಲವಂತವಾಗಿ ತಮ್ಮ ಮೇಲೆ ಬಣ್ಣ ಎರಚುತ್ತಿರುವಾಗ ವಿರೋಧಿಸಿದ್ದಕ್ಕಾಗಿ, ಪಾನಮತ್ತ ಯುವಕರ ಗುಂಪು ಮಹಿಳೆಯನ್ನು ಥಳಿಸಿ ಸಾಯಿಸಿದ್ದಾರೆ. ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಬಲಬದ್ದಾ ಪೊಲೀಸ್​ ಠಾಣಾ ಪೊಲೀಸರು ಆರೋಪಿಗಳಿಗಾಗಿ ಹುಟುಕಾಟ ನಡೆಸುತ್ತಿದ್ದಾರೆ.

ಹಲಗೆ ಬಾರಿಸುವ ವಿಚಾರಕ್ಕೆ ಯುವಕನ ಕೊಲೆ:ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಿನ್ನೆ ಹೋಳಿ ಹಬ್ಬ ಆಚರಣೆ ವೇಳೆ ಯುವಕರ ಮಧ್ಯೆ ಗಲಾಟೆಯಾಗಿ ಓರ್ವ ಯವಕನನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿದೆ. ಹೋಳಿ ಸಬ್ಬದ ಸಂದರ್ಭ ಹಲಗೆ ಬಾರಿಸುವ ವಿಚಾರಕ್ಕೆ ಯುವಕರ ಮಧ್ಯೆ ಗಲಾಟೆ ನಡೆದಿದೆ. ಆದರೆ, ಈ ಗಲಾಟೆಗೆ ಕಾರಣವೇ ಅಲ್ಲದ ಯುವಕನ ಚೂರಿ ಇರಿತಕ್ಕೊಳಗಾಗಿ ಸಾವನ್ನಪ್ಪಿದ್ದಾನೆ.

ಮೃತ ಯುವಕನ ಸಂಬಂಧಿ ಯುವಕ ಹಾಗೂ ಇನ್ನೋರ್ವ ಯುವಕನ ಮಧ್ಯೆ ಗಲಾಟೆಯಾಗಿದೆ. ಹೋಳಿ ಹಬ್ಬಕ್ಕೆ ಹಲಗೆ ಬಾರಿಸುತ್ತಿದ್ದ ಓರ್ವ ಯುವಕನಿಗೆ ಒನ್ನೊಬ್ಬ ಬಂದು ಅಲ್ಲಿ ಹಲಗೆ ಬಾರಿಸಬೇಡ ಎಂದು ಹೇಳಿದ್ದಾನೆ. ಅಷ್ಟಕ್ಕೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಮಾತು ಜಗಳಕ್ಕೆ ಹೋಗಿ ಮಧ್ಯದಲ್ಲಿ ಬಂದ ಗಿರೀಶ್​ ಎನ್ನುವ ಯುವಕನಿಗೆ ಚೂರಿಯಿಂದ ಇರಿದಿದ್ದಾರೆ. ಗಾಯಗೊಂಡು ನರಳಾಡುತ್ತಿದ್ದರೂ ತಕ್ಷಣವೇ ಆಸ್ಪತ್ರೆಗೆ ಸಾಗಿಸದೆ, ತಡವಾಗಿ ಆಸ್ಪತ್ರೆಗೆ ಸಾಗಿಸಿದ ಕಾರಣ ಮಾರ್ಗಮಧ್ಯದಲ್ಲಿಯೇ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ:IAS​ ಅಧಿಕಾರಿಯನ್ನೇ ಕೂಡಿಹಾಕಿ ಥಳಿಸಿ ಮುಚ್ಚಳಿಕೆ ಪತ್ರ ಬರೆಸಿಕೊಂಡ ಮೀನುಗಾರರು!

ABOUT THE AUTHOR

...view details