ಹುಬ್ಬಳ್ಳಿ:ಸರಕು ಸಾಮಾನುಗಳನ್ನ ಹೊತ್ತು ವಿಜಯಪುರದತ್ತ ಹೊರಟಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುವ ಘಟನೆ ತಾಲ್ಲೂಕಿನ ಕುಸುಗಲ್ ರಸ್ತೆಯಲ್ಲಿ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ... ತಪ್ಪಿದ ಅನಾಹುತ! - ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ
ಹುಬ್ಬಳ್ಳಿಯಿಂದ ಸೊಲ್ಲಾಪುರದತ್ತ ಹೊರಟಿದ್ದ ಲಾರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
![ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ... ತಪ್ಪಿದ ಅನಾಹುತ! lorry accident in hubali](https://etvbharatimages.akamaized.net/etvbharat/prod-images/768-512-8815999-423-8815999-1600197578119.jpg)
lorry accident in hubali
ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ
ಹುಬ್ಬಳ್ಳಿಯಿಂದ ಸೊಲ್ಲಾಪುರದತ್ತ ಹೊರಟಿದ್ದ ಲಾರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅದರಲ್ಲಿದ್ದ ನಿಸಾರ ಮತ್ತು ಮಲ್ಲಪ್ಪ ಎಂಬುವವರು ಜಿಗಿದು ಪಾರಾಗಿದ್ದಾರೆ.
ಅಪಘಾತ ಸಂಭವಿಸಿದ ಪರಿಣಾಮ ಸ್ವಲ್ಪ ಅಂತರದಲ್ಲಿ ಕಂಬ ಬಿದ್ದರೂ ತಂತಿ ತಾಗದೆ ಇರುವುದರಿಂದ ಆಗಬೇಕಾದ ಬಹುದೊಡ್ಡ ಅನಾಹುತ ತಪ್ಪಿಂದತ್ತಾಗಿದೆ. ಈ ಘಟನೆ ಗ್ರಾಮೀಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.