ಕರ್ನಾಟಕ

karnataka

ETV Bharat / state

ಇನ್ನೂ ಸುಧಾರಿಸದ ಬಯಲು ಬಹಿರ್ದೆಸೆ: ಲೋಕಾಯುಕ್ತ ನ್ಯಾಯಮೂರ್ತಿ ಪಾಟೀಲ್ ಅಸಮಾಧಾನ - ಉತ್ತರ ಕರ್ನಾಟಕ

District level officials meeting: ಸರದ ಗುದ್ದಣ್ಣ, ಗುದ್ದಿದರೇ ಸರಿಯಣ್ಣ ಇದು ಉತ್ತರ ಕರ್ನಾಟಕದ ಕಡೆಯವರ ಸ್ವಭಾವ. ಇವರಿಗೆ ಕಾನೂನು ಪ್ರಕಾರವೇ ತಿಳಿಸಿ ಹೇಳಬೇಕಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಹೇಳಿದರು.

District level officials meeting in Zilla Panchayat hall
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ

By ETV Bharat Karnataka Team

Published : Dec 1, 2023, 6:02 PM IST

Updated : Dec 1, 2023, 7:12 PM IST

ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್

ಧಾರವಾಡ: ಬೇರೆಯವರ ಮನೆ ಮುಂದೆ ಹೋಗಿ ಬಹಿರ್ದೆಸೆ ಮಾಡುವ ಉತ್ತರ ಕರ್ನಾಟಕದ ಜನರ ಮನಸ್ಥಿತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್, ಬಯಲು ಬಹಿರ್ದೆಸೆ ಮುಕ್ತ ಮಾಡಲು ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳ ಸಭೆಯ ಮಧ್ಯೆ ಮಾರ್ಮಿಕವಾಗಿ, ವಿಜಯಪುರ, ಬಾಗಲಕೋಟೆ, ಯಾದಗಿರಿ, ಧಾರವಾಡ, ಬೆಳಗಾವಿ, ಕಲಬುರ್ಗಿ ಜನರಿಗೆ ಬಹಿರ್ದೆಸೆ ವಿಷಯದಲ್ಲಿ ಬಹಳಷ್ಟು ಹೇಳಬೇಕಿದೆ. ಈ ಕಡೆ ಜನರ ಮನಸ್ಥಿತಿ ಬದಲಾಗಬೇಕಿದೆ. ಬಯಲು ಬಹಿರ್ದೆಸೆ ನಿಲ್ಲಿಸಲು ಸಾಕಷ್ಟು ಜಾಗೃತಿ ಮಾಡಿದ್ದೇವೆ. ಹಾರ ಹಾಕಿಯೂ ಹೇಳಿದ್ದೇವೆ. ಆದರೂ ಕಡಿಮೆಯಾಗಿಲ್ಲ. ಇವರಿಗೆ ಕಾನೂನು ಪ್ರಕಾರವೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದರು.

ಹಿರಿಯರನ್ನು ಕರೆಯಿಸಿ ತಿಳಿಸಿ ಹೇಳಬೇಕು. ಶಿಕ್ಷಕರ ಕಡೆಯಿಂದಲೂ ಹೇಳಿಸಬೇಕು. ಆ ಬಳಿಕವೂ ಶೌಚಾಲಯ ಕಟ್ಟಿಸದಿದ್ದರೆ ಅಂಥವರಿಗೆ ಕೊಡುವ ಸವಲತ್ತುಗಳನ್ನು ನಿಲ್ಲಿಸಬೇಕು. ಈ ವಿಷಯದಲ್ಲಿ ಕಠಿಣ ಕ್ರಮಗಳು ಆಗಲೇಬೇಕಿದೆ. ಸರದ ಗುದ್ದಣ್ಣ, ಗುದ್ದಿದರೇ ಸರಿಯಣ್ಣ ಇದು ಈ ಕಡೆಯವರ ಸ್ವಭಾವ. ಇವರಿಗೆ ಕಾನೂನು ಪ್ರಕಾರವೇ ತಿಳಿಸಿ ಹೇಳಬೇಕಿದೆ. ಅನೇಕ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಪಾಡು ಬೇಡ ಎನ್ನುವ ಸ್ಥಿತಿ ಇದೆ. ಸುಸಂಸ್ಕೃತ ಕುಟುಂಬದವರೇ ಇರ್ತಾರೆ. ಪಟ್ಟಣಕ್ಕೆ ಹೋಗಿ ಸಿನಿಮಾ ನೋಡಿ ಎಂಜಾಯ್ ಮಾಡಿ ಬರ್ತಾರೆ. ಆದರೆ ಮನೆಗೆ ಶೌಚಾಲಯ ಮಾತ್ರ ಕಟ್ಟಿಸಿಕೊಳ್ಳುವುದಿಲ್ಲ, ಸರ್ಕಾರ ಕಟ್ಟಿಸಿದ ಶೌಚಾಲಯದಲ್ಲಿ ಕನಕಿ, ಹೊಟ್ಟು ಇಡುತ್ತಾರೆ. ಇಂತಹ ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಿ ನೌಕರಿಯಲ್ಲಿದ್ದವರೂ ಶೌಚಾಲಯ ಕಟ್ಟಿಸಿಲ್ಲ:ಕಂಡಕ್ಟರ್, ಶಿಕ್ಷಕ, ಗ್ರಾಮಸೇವಕದಂತಹ ಸರ್ಕಾರಿ ನೌಕರರಿದ್ದರೂ ಶೌಚಾಲಯ ಕಟ್ಟಿಸುವುದಿಲ್ಲ, ಶೌಚಾಲಯ ಕಟ್ಟಿಸದ ಗ್ರಾಮೀಣ ಭಾಗದ ಇಂತಹ ಸರ್ಕಾರಿ ನೌಕರರನ್ನು ಅಮಾನತು ಮಾಡುವ ಕ್ರಮ ಆಗಬೇಕು. ಆಗ ಇವರಿಗೆ ಬಿಸಿ ಮುಟ್ಟಿಸಬಹುದು. ಅಧಿಕಾರಿಗಳು ತಮ್ಮ ಸಾಮರ್ಥ್ಯ ಎಲ್ಲ ಬಳಸಿಕೊಳ್ಳಬೇಕು. ಸರ್ಕಾರ ಇಷ್ಟೆಲ್ಲ ಸಬ್ಸಿಡಿ ಕೊಡುತ್ತಿದೆ. ಆದರೆ, ಇವರು ಅದರ ದುರುಪಯೋಹ ಮಾಡುತ್ತಾರೆ. ಅಧಿಕಾರಿಗಳು ಸಹ ಜನರ ಮನಸ್ಥಿತಿ ಬದಲಿಸಲು ಆಗುತ್ತಿಲ್ಲ. ಅವರಂತೆಯೇ ಅಧಿಕಾರಿಗಳು ಆಗಿದ್ದಾರೆ. ಹೀಗೆ ಆದರೆ ಇನ್ನೂ ನೂರು ವರ್ಷವಾದರೂ ನಾವು ಹೀಗೆ ಇರುತ್ತೇವೆ. ಸ್ವಚ್ಛತೆ ದೂರವೇ ಉಳಿಯುತ್ತದೆ. ಕರೋನಾದಂತಹ ವೈರಸ್ ಬಂದರೆ ಮತ್ತೆ ಪಟ ಪಟ ಸತ್ತು ಹೋಗುತ್ತೇವೆ. ಹೀಗಾಗಿ ಅಧಿಕಾರಿಗಳು ಈಗಿನಿಂದಲೇ ಶೌಚಾಲಯ ನಿರ್ಮಾಣದ ಬಗ್ಗೆ ಗಮನ ಹರಿಸಬೇಕು ಎಂದರು.

ಧಾರವಾಡವನ್ನು ಆದರ್ಶ ಆಡಳಿತ ವ್ಯವಸ್ಥೆಯ ಜಿಲ್ಲೆಯನ್ನಾಗಿ ಮಾಡಲು ಕರೆ:ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲ ಇಲಾಖೆಗಳ ಸಾಮಾನ್ಯ ದೂರುಗಳ ಬಗ್ಗೆ ಪರಿಶೀಲನೆ ಮಾಡಿದ್ದೇವೆ. ಲೋಕಾಯುಕ್ತ ಕಾಯಿದೆಯಡಿ ಜವಾಬ್ದಾರಿ ‌ಹೇಗೆ ನಿಭಾಯಿಸಬೇಕು ಎಂದು ತಿಳಿಸಿದ್ದೇವೆ. ಲೋಕಾಯುಕ್ತ ತನಿಖೆ ಹೇಗೆ, ಏನೆಲ್ಲ ಶಿಕ್ಷೆ ಇದೆ ಅಂತಾ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಧಾರವಾಡವನ್ನು ಆದರ್ಶ ಆಡಳಿತ ವ್ಯವಸ್ಥೆಯ ಜಿಲ್ಲೆಯನ್ನಾಗಿ ಮಾಡುವಂತೆ ಸೂಚನೆ ಕೊಟ್ಟಿದ್ದೇನೆ. ಇದು ಮಾದರಿ ಆಡಳಿತದ ನಂ. 1 ಜಿಲ್ಲೆಯಾಗಬೇಕು. ಆ ನಿಟ್ಟಿನಲ್ಲಿ ಕಾರ್ಯ ಮಾಡಲು ಹೇಳಿದ್ದೇನೆ ಎಂದರು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಹೇಳಿದ್ದೇವೆ 1206 ಕೆರೆಗಳು ಜಿಲ್ಲೆಯಲ್ಲಿವೆ. ಎಲ್ಲ ಕೆರೆಗಳನ್ನು ಸರ್ವೆ ಮಾಡಿದ್ದಾರೆ. ಕೆರೆಗಳ ಒತ್ತುವರಿ ಬಗ್ಗೆ ಕ್ರಮಕ್ಕೆ ಸೂಚಿಸಲಾಗಿದೆ. ಕೆರೆಗೆ ಹರಿದು ಬರುವ ನೀರು ತಡೆದರೆ ತೆರವು ಮಾಡಲು ಹೇಳಿದ್ದೇವೆ. 84 ಕೆರೆಗಳ ಅತಿಕ್ರಮಣ ಈಗಾಗಲೇ ತೆರವು ಮಾಡಿದ್ದಾರೆ. ಸುಮಾರು 70 ಕೆರೆಗಳ ಅತಿಕ್ರಮಣ ತೆರವು ಉಳಿದಿದೆ. ಕೆಲವು ಕಡೆ ಶಾಲೆ, ಅಂಗನವಾಡಿ ಕಟ್ಟಿದ್ದಾರಂತೆ ಅಂಥವುಗಳ ಬಗ್ಗೆ ವರದಿ ಕೊಡಲು ಹೇಳಿದ್ದೇನೆ.

ಇಂಧೋರ್​ ಮಾದರಿಯಲ್ಲಿ ಹು - ಧಾ ಸ್ವಚ್ಛ ನಗರ ಆಗಬೇಕು. ಆ ರೀತಿಯಲ್ಲಿ ಅವಳಿ ನಗರ ಕ್ಲಿನ್ ಸಿಟಿ ಮಾಡಲು ನಿರ್ದೇಶನ ನೀಡಿದ್ದೇನೆ. ಹಲವು ಜನರು ಇವತ್ತು ದೂರುಗಳನ್ನು ಕೊಟ್ಟಿದ್ದಾರೆ. ಅದರಲ್ಲಿ ಕೆಲವೊಂದನ್ನು ಸ್ಥಳೀಯ ಅಧಿಕಾರಿಗಳೇ ಸರಿ ಮಾಡುತ್ತಾರೆ. ಕೆಲವನ್ನು ಮಾತ್ರ ನಾವು ದಾಖಲಿಸಿಕೊಂಡಿದ್ದೇವೆ. ಒಟ್ಟು 63 ವೈಯಕ್ತಿಕ ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.

ನಾವೇ ಅನೇಕ ಕೇಸ್‌ಗಳನ್ನು ಸ್ವಯಂ ಪ್ರೇರಿತ ದಾಖಲಿಸಿಕೊಳ್ಳುತ್ತೇವೆ. ಧಾರವಾಡ ಜಿಲ್ಲಾಸ್ಪತ್ರೆಗೆ ನಿನ್ನೆ ಭೇಟಿ ನೀಡಿದ್ದೆ, ಅಲ್ಲಿನ ಕೆಲವು ನೂನ್ಯತೆಗಳ ಬಗ್ಗೆ ಕೇಸ್ ಮಾಡಿಕೊಳ್ಳುತ್ತೇವೆ. ಅಲ್ಲಿ ಚಿಕ್ಕಮಕ್ಕಳ ವಿಭಾಗದಲ್ಲಿ ಕೇವಲ 20 ಬೆಡ್ ಇವೆ. ಅಲ್ಲಿ 40 ಬೆಡ್ ಬೇಕಿವೆಯಂತೆ ಆ ಬಗ್ಗೆ ದೂರು ದಾಖಲಿಸಿಕೊಳ್ಳುತ್ತೇನೆ. ಸರ್ಕಾರವನ್ನೇ ಪಾರ್ಟಿ ಮಾಡಿ ಕೇಸ್ ಹಾಕುತ್ತೇನೆ. ನಮ್ಮ ತನಿಖೆ ಬಳಿಕ ರೆಕಮೆಂಡೇಷನ್ ಕೊಡುತ್ತೇವೆ ಎಂದರು.

ಇದನ್ನೂ ಓದಿ:ಚಳಿಗಾಲ ಅಧಿವೇಶನದ ಬಳಿಕ ಮೈಸೂರಿನ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಜನತಾದರ್ಶನ: ಸಚಿವ ಮಹದೇವಪ್ಪ

Last Updated : Dec 1, 2023, 7:12 PM IST

ABOUT THE AUTHOR

...view details