ಕರ್ನಾಟಕ

karnataka

ETV Bharat / state

ಲೋಕಸಮರ : ತಳಿರು ತೋರಣಗಳಿಂದ ಸಿಂಗಾರಗೊಂಡ ಸಖಿ ಕೇಂದ್ರಗಳು - undefined

ನಾಳೆ ಲೋಕಸಭಾ ಚುನಾವಣಾ ಎರಡನೇ ಹಂತದ ಮತದಾನ ನಡೆಯಲಿದ್ದು, ನಗರದಲ್ಲಿ ಒಟ್ಟು ನಾಲ್ಕು ಸಖಿ ಮತಗಟ್ಟೆಗಳನ್ನು ಹಸಿರು ತಳಿರು ತೋರಣ, ಬಣ್ಣಗಳಿಂದ ಅಲಂಕೃತಗೊಂಡಿರುವ ರಂಗೋಲಿಯಿಂದ ಮತದಾರರನ್ನು ಸ್ವಾಗತಿಸಲು ಸಿದ್ಧಗೊಂಡಿವೆ.

ಹುಬ್ಬಳ್ಳಿ ಲೋಕಸಭಾ ಸಖಿ ಮತಗಟ್ಟೆಗಳು

By

Published : Apr 22, 2019, 11:33 PM IST

ಹುಬ್ಬಳ್ಳಿ: ನಾಳೆ ಲೋಕಸಭಾ ಚುನಾವಣಾ ಎರಡನೇ ಹಂತದ ಮತದಾನ ನಡೆಯಲಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿರುವ ಸಖಿ ಮತಗಟ್ಟೆ ಕೇಂದ್ರಗಳು ಹಸಿರು ತಳಿರು ತೋರಣ, ಬಣ್ಣಗಳಿಂದ ಅಲಂಕೃತಗೊಂಡಿರುವ ರಂಗೋಲಿಯಿಂದ ಮತದಾರರನ್ನು ಸ್ವಾಗತಿಸಲು ಸಿದ್ಧಗೊಂಡಿವೆ.

ನಾಳೆ ನಡೆಯಲಿರುವ ಚುನಾವಣೆಗಾಗಿ ಚುನಾವಣಾ ಆಯೋಗ ನಗರದಲ್ಲಿ ಒಟ್ಟು ನಾಲ್ಕು ಸಖಿ ಮತಗಟ್ಟೆಗಳನ್ನು ಗುರುತಿಸಿದೆ. ತೊರವಿಗಲ್ಲಿ, ಬಾಸೆಲ್ ಮಿಷನ್, ವಿದ್ಯಾನಗರದ ವೇಲಾಂಗಣಿಕ ಶಿಕ್ಷಣ ಸಂಸ್ಥೆ, ಹೊಸರಿನ ಸರ್ಕಾರಿ ಕಲಾ ತರಬೇತಿ ಸಂಸ್ಥೆಗಳಲ್ಲಿ ಸಖಿ ಮತಗಟ್ಟೆಗಳಿವೆ. ಚುನಾವಣಾ ಕರ್ತವ್ಯ ನಿಯೋಜನೆಗೊಂಡ ಅಧಿಕಾರಿಗಳು, ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಶಾಲಾ ಸಿಬ್ಬಂದಿ ಮತಗಟ್ಟೆಯನ್ನು ಸಿಂಗರಿಸುವಲ್ಲಿ ವಿಶೇಷ ಆಸಕ್ತಿ ತೋರಿದ್ದಾರೆ.

ಹುಬ್ಬಳ್ಳಿ ಲೋಕಸಭಾ ಸಖಿ ಮತಗಟ್ಟೆಗಳು

ಮಹಿಳೆಯರನ್ನು ಮತದಾನ ಮಾಡಲು ಪ್ರೇರೆಪಿಸಲು ಹಾಗೂ ಮತಗಟ್ಟೆಗಳಲ್ಲಿ ಮಹಿಳಾ ಸ್ನೇಹಿ ವಾತವರಣ ಸೃಷ್ಠಿಸಲು ಚುನಾವಣಾ ಆಯೋಗ ವಿಶೇಷ ಗಮನ ಹರಿಸಿದೆ. ಮಹಿಳೆಯರು ಪ್ರಜಾಪ್ರಭುತ್ವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು.ಮತದಾನ ಹಕ್ಕನ್ನು ಚಲಾಯಿಸಬೇಕು. ಜನಸಂಖ್ಯೆ ಸರಾಸರಿ ಅರ್ಧದಷ್ಟಿರುವ ಮಹಿಳೆಯರು ಪ್ರಜಾಪ್ರಭುತ್ವದಲ್ಲಿ ಹೆಚ್ಚಿನ ಆಸಕ್ತಿ ತಾಳಬೇಕು ಎಂಬ ಆಶಯದಿಂದ ಚುನಾವಣಾ ಆಯೋಗ ಸಖಿ ಮತಗಟ್ಟೆ ಕಲ್ಪನೆ ರೂಪಿಸಿದೆ.

ಆಯೋಗದ ನಿರ್ದೇಶನದಂತೆ ಸಖಿ ಮತಟ್ಟೆಗಳನ್ನು ಮಹಿಳೆಯರ ಮೂಲಭೂತ ಅಗತ್ಯ ಹಾಗೂ ಸೌಕರ್ಯಗಳನ್ನು ಗಮನದಲ್ಲಿಟ್ಟು ಸಿದ್ಧಪಡಿಸಲಾಗಿದೆ. ವಿಕಲಚೇತನ, ಗರ್ಭಿಣಿ, ಬಾಣಂತಿಯರು, ಚಿಕ್ಕಮಕ್ಕಳನ್ನು ಹೊಂದಿರು ತಾಯಾಂದಿರು, ಹಿರಿಯ ನಾಗರಿಕರಿಗೆ ಮತಗಟ್ಟೆಗಳಲ್ಲಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಹುಬ್ಬಳ್ಳಿ ಲೋಕಸಭಾ ಸಖಿ ಮತಗಟ್ಟೆಗಳು

ಪ್ರಥಮ ಬಾರಿಗೆ ವಿಕಲಚೇತನರನ್ನು ಮತದಾನ ಕೇಂದ್ರಕ್ಕೆ ವಾಹನ ವ್ಯವಸ್ಥೆ ಕಲ್ಪಿಸಿರುವ ಚುನಾವಣಾ ಆಯೋಗ. ವಿಶೇಷವಾಗಿ ವಿಕಲಚೇತನರ ಮತಗಟ್ಟೆಗಳನ್ನು ಸಹ ಸ್ಥಾಪಿಸಿದೆ. ಮತಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಕೂಡ ವಿಕಲಚೇತನರಾಗಿದ್ದಾರೆ. ಈ ಮತಗಟ್ಟೆಗಳಲ್ಲಿ ವಾಹನ ವ್ಯವಸ್ಥೆ, ಇಳಿಜಾರು ಅಟ್ಟಣಿಗೆ ಸುಸಜ್ಜಿತ ವೀಲ್‍ಚೇರ್ ವ್ಯವಸ್ಥೆ ಕಲ್ಪಿಸಲಾಗಿದೆ.

For All Latest Updates

TAGGED:

ABOUT THE AUTHOR

...view details