ಧಾರವಾಡ: ಲಾಕ್ಡೌನ್ನಿಂದಾಗಿ ಆಸ್ಪತ್ರೆಗಳಲ್ಲಿ ಇತರೆ ರೋಗಿಗಳಿಗೂ ರಕ್ತದ ಅವಶ್ಯಕತೆ ಉಂಟಾಗಲಿದ್ದು, ಈ ಹಿನ್ನೆಲೆ ರಕ್ತದ ಕೊರತೆ ಉಂಟಾಗಬಾರದು ಎಂದು ಲಾರಿ ಚಾಲಕರು ರಕ್ತದಾನ ಮಾಡಿದ್ದಾರೆ.
ಧಾರವಾಡ: ರಕ್ತದಾನ ಮಾಡಿ ಮಾನವೀಯತೆ ಮೆರೆದ ಲಾರಿ ಚಾಲಕರು - dharwad news
ಧಾರವಾಡದ ಜಿಲ್ಲಾಸ್ಪತ್ರೆಯಲ್ಲಿ ಲಾರಿ ಚಾಲಕರು ಹಾಗೂ ಮಾಲೀಕರು ರಕ್ತದಾನ ಮಾಡಿದ್ದಾರೆ.
ಲಾಕ್ಡೌನ್: ರಕ್ತದ ಕೊರತೆ ಆಗಬಾರದೆಂದು ರಕ್ತದಾನ ಮಾಡಿದ ಲಾರಿ ಚಾಲಕರು
ಕೊರೊನಾ ಭೀತಿ ಹಿನ್ನೆಲೆ ರಕ್ತದ ಕೊರತೆ ಉಂಟಾಗಬಾರದು ಎಂದು ರಕ್ತದಾನ ಮಾಡಿ ಖಾಸಗಿ ವಾಹನ ಚಾಲಕರು ಮತ್ತು ಮಾಲೀಕರು ಮಾನವೀಯತೆ ಮೆರೆದಿದ್ದಾರೆ. ಧಾರವಾಡದ ಜಿಲ್ಲಾಸ್ಪತ್ರೆಯಲ್ಲಿ ಲಾರಿ ಚಾಲಕರು ಹಾಗೂ ಮಾಲೀಕರು ರಕ್ತದಾನ ಮಾಡಿದ್ದಾರೆ. ಧಾರವಾಡದ ಜಿವಿ ಕಾರ್ಗೋ ಮೋಟರ್ಸ್ ಮತ್ತು ಮೂವರ್ಸ್ ವತಿಯಿಂದ ರಕ್ತದಾನ ಮಾಡಲಾಗಿದೆ. ಸ್ವಯಂ ಪ್ರೇರಿತವಾಗಿ ಬಂದು 6 ಜನ ಚಾಲಕರು ಮತ್ತು ಸಂಸ್ಥೆಯ ಮಾಲೀಕರು ರಕ್ತದಾನ ಮಾಡಿದ್ದಾರೆ.