ಧಾರವಾಡ: ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಲಾಕ್ಡೌನ್ ಹೇರಿದೆ. ಅನಗತ್ಯವಾಗಿ ಓಡಾಡುವ ಜನರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ಇದರ ಮಧ್ಯೆ ನಗರದಲ್ಲಿ ಕೆಲವರು ವಾಹನಗಳನ್ನು ಬಿಟ್ಟು ಸೈಕಲ್ ಮೊರೆ ಹೋಗಿದ್ದಾರೆ.
ರಸ್ತೆಗಿಳಿದ್ರೆ ಬೈಕ್ ಸೀಜ್: ಸೈಕಲ್ ಮೊರೆ ಹೋದ ಧಾರವಾಡ ಮಂದಿ - ರಸ್ತೆಗೀಳಿದ್ರೆ ಬೈಕ್ ಸೀಜ್ ಸೈಕಲ್ ಮೊರೆ ಹೋದ ಧಾರವಾಡ ಮಂದಿ
ವಾಹನ ಸಂಚಾರ ಸಂಪೂರ್ಣವಾಗಿ ನಿರ್ಬಂಧಿಸಿದ ಹಿನ್ನೆಲೆ ಅಗತ್ಯ ವಸ್ತುಗಳ ಖರೀದಿಗೆ ಜನ ನಡೆದುಕೊಂಡೇ ಹೋಗಬೇಕು ಎಂಬ ನಿಯಮದಿಂದ ಸುಭಾಷ್ ರಸ್ತೆಯಲ್ಲಿ ದಿನ ಬಳಕೆ ವಸ್ತು, ತರಕಾರಿ ಖರೀದಿಸಲು ಸೈಕಲ್ ಏರಿ ಬಂದಿದ್ದಾರೆ.
ಸೈಕಲ್ ಮೊರೆ ಹೋದ ಧಾರವಾಡ ಮಂದಿ
ಅಗತ್ಯ ಸೇವೆಗಳ ಖರೀದಿಗೆ ಆಗಮಿಸುವ ಜನರು ತಮ್ಮ ವಾಹನ ಬಿಟ್ಟು ಸೈಕಲ್ ಮೂಲಕ ಆಗಮಿಸಿ ಬೇಕಾದ ವಸ್ತುಗಳನ್ನು ಖರೀದಿ ಮಾಡಿದ್ದಾರೆ. ವಾಹನ ಸಂಚಾರ ಸಂಪೂರ್ಣವಾಗಿ ನಿರ್ಬಂಧಿಸಿದ ಹಿನ್ನೆಲೆ ಅಗತ್ಯ ವಸ್ತುಗಳ ಖರೀದಿಗೆ ಜನ ನಡೆದುಕೊಂಡೇ ಹೋಗಬೇಕು ಎಂಬ ನಿಯಮದಿಂದ ಸುಭಾಷ್ ರಸ್ತೆಯಲ್ಲಿ ದಿನ ಬಳಕೆ ವಸ್ತುಗಳು, ತರಕಾರಿ ಖರೀದಿಸಲು ಸೈಕಲ್ ಏರಿ ಬಂದಿದ್ದಾರೆ.
ಓದಿ : ಜಪ್ತಿ ಮಾಡಿದ ಬೈಕ್ನೊಂದಿಗೆ ಪರಾರಿ ಆಗಲು ಯತ್ನಿಸಿದ ಸವಾರ.. ಪೊಲೀಸರು ಮಾಡಿದ್ದೇನು ನೋಡಿ