ಧಾರವಾಡ: ದೇಶಾದ್ಯಂತ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದ್ದರಿಂದ ನಷ್ಟಕ್ಕೀಡಾದ ರೈತನೊಬ್ಬ ಕಷ್ಟಪಟ್ಟು ಬೆಳೆದ ಹೂವುಗಳನ್ನು ತನ್ನ ಕೈಯಾರೆ ನಾಶ ಮಾಡಿದ್ದಾನೆ.
ಮಾರುಕಟ್ಟೆ ಇಲ್ಲದೆ ಮನನೊಂದು ರೈತನಿಂದ ಸೇವಂತಿ ಬೆಳೆ ನಾಶ - Destruction of crop in Dharwad
ಕೊರೊನಾ ನಿಯಂತ್ರಿಸಲು ಲಾಕ್ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆ ಇಲ್ಲ ಎಂಬ ಕಾರಣಕ್ಕೆ ಧಾರವಾಡ ತಾಲೂಕಿನ ಬೆನಕನಕಟ್ಟಿ ಗ್ರಾಮದ ರೈತನೊಬ್ಬ ಕಷ್ಟಪಟ್ಟು ಬೆಳೆದ ಹೂವುಗಳನ್ನು ತಾನೇ ಹಾಳು ಮಾಡಿರುವ ಘಟನೆ ನಡೆದಿದೆ.

ಲಾಕ್ಡೌನ್ ಎಫೆಕ್ಟ್: ಮಾರುಕಟ್ಟೆ ಇಲ್ಲದೆ ಮನನೊಂದು ಸೇವಂತಿ ಬೇಳೆ ನಾಶ ಮಾಡಿದ ರೈತ
ಲಾಕ್ಡೌನ್ ಎಫೆಕ್ಟ್: ಮಾರುಕಟ್ಟೆ ಇಲ್ಲದೆ ಮನನೊಂದು ಸೇವಂತಿ ಬೆಳೆ ನಾಶ ಮಾಡಿದ ರೈತ
ಧಾರವಾಡ ತಾಲೂಕಿನ ಬೆನಕನಕಟ್ಟಿ ಗ್ರಾಮದ ಶಂಕರಪ್ಪ ಯರಗಂಬಳಿಮಠ ಎಂಬ ರೈತ ತಾವೇ ಬೆಳೆದಿದ್ದ ಸೇವಂತಿ ಬೆಳೆಯನ್ನು ನಾಶ ಮಾಡಿದ್ದಾರೆ. ಇವರು ಸುಮಾರು ಒಂದು ಎಕರೆ ಜಮೀನಿನಲ್ಲಿ ಸೇವಂತಿ ಹೂವು ಬೆಳೆದಿದ್ದರು. ಹತ್ತರಿಂದ ಐದಿನೈದು ಸಾವಿರ ಖರ್ಚು ಮಾಡಿ ಕೃಷಿ ಇದೀಗ ಮಾರುಕಟ್ಟೆ ಇಲ್ಲದ ಕಾರಣ ನೊಂದು ಇಂತಹ ನಿರ್ಧಾರ ಕೈಗೊಂಡಿದ್ದಾಗಿ ಶಂಕರಪ್ಪ ಹೇಳಿದ್ದಾರೆ.