ಹುಬ್ಬಳ್ಳಿ(ಧಾರವಾಡ): ಲಾಕ್ಡೌನ್ ಸಡಿಲಿಕೆ ಹಿನ್ನೆಲೆ ಆಟೋ, ಖಾಸಗಿ ವಾಹನಗಳು ಸೇರಿದಂತೆ ಬೈಕ್ ಸವಾರರು ರಸ್ತೆಗಿಳಿದಿದ್ದು, ವಾಣಿಜ್ಯ ನಗರಿ ಮತ್ತೆ ಸಹಜ ಸ್ಥಿತಿಗೆ ಮರಳಿದಂತೆ ಭಾಸವಾಗುತ್ತಿದೆ.
ಲಾಕ್ಡೌನ್ ಸಡಿಲಿಕೆ: ಸಹಜ ಸ್ಥಿತಿಗೆ ಮರಳುತ್ತಿದೆ ವಾಣಿಜ್ಯ ನಗರಿ - ವಾಣಿಜ್ಯ ನಗರಿ ಹುಬ್ಬಳ್ಳಿ
ಹುಬ್ಬಳ್ಳಿಯಲ್ಲಿ ಲಾಕ್ಡೌನ್ ಸಡಿಲಿಕೆ ಹಿನ್ನೆಲೆ ಆಟೋ, ಖಾಸಗಿ ವಾಹನಗಳು ಸೇರಿದಂತೆ ಬೈಕ್ ಸವಾರರು ರಸ್ತೆಗಿಳಿದಿದ್ದು, ವಾಣಿಜ್ಯ ನಗರಿ ಮತ್ತೆ ಸಹಜ ಸ್ಥಿತಿಗೆ ಮರಳಿದಂತೆ ಭಾಸವಾಗುತ್ತಿದೆ.
ಈ ಹಿಂದಿನ ಮೂರನೇ ಹಂತದ ಲಾಕ್ಡೌನ್ನಲ್ಲಿ ಖಾಸಗಿ ವಾಹನ ಸೇರಿದಂತೆ ಆಟೋ ಸಂಚಾರಕ್ಕೆ ಬ್ರೇಕ್ ಹಾಕಲಾಗಿತ್ತು. ಆದ್ರೀಗ ಕೇಂದ್ರವೇ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ನಗರದೆಲ್ಲೆಡೆ ಖಾಸಗಿ ವಾಹನಗಳ ಓಡಾಟ ಜೋರಾಗಿದೆ. ಇನ್ನು ನಗರದ ಕಂಟೇನ್ಮೆಂಟ್ ಪ್ರದೇಶಗಳಿಗೆ ಜನರ ಪ್ರವೇಶ ನಿಷೇಧವಿದ್ದು, ಉಳಿದಂತೆ ಜಿಲ್ಲಾಡಳಿತದಿಂದ ಎಲ್ಲಾ ವಾಣಿಜ್ಯ ವಹಿವಾಟಿಗೆ ಅಸ್ತು ಸಿಕ್ಕಂತಾಗಿದೆ. ಸಂಜೆ 7 ಗಂಟೆಗೆ ವಾಹನ ಮತ್ತು ವಾಣಿಜ್ಯ ವಹಿವಾಟಿಗೆ ಎಂದಿನಂತೆ ಬ್ರೇಕ್ ಹಾಕಲಾಗುತ್ತದೆ.
ಇನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಹಾಗೂ ನಗರ ಸಾರಿಗೆ ಬಸ್ ಸಂಚಾರಕ್ಕೆ ಸಾರಿಗೆ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಆದರೆ ರಾಜ್ಯ ಸರ್ಕಾರ ಇಂದು ಸಭೆ ನಡೆಸಲಿದ್ದು, ಬಸ್ ಸಂಚಾರದ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಇದರ ಮಧ್ಯೆ ನಗರದ ಬಸ್ ನಿಲ್ದಾಣಗಳಲ್ಲೂ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ.