ಧಾರವಾಡ: ಕೊರೊನಾ ನಿಯಂತ್ರಣಕ್ಕೆ ಮುಂದಾಗಿರುವ ಸರ್ಕಾರ ಕಠಿಣ ಲಾಕ್ಡೌನ್ ಜಾರಿಗೊಳಿಸಿದೆ. ಹೀಗಾಗಿ ಹೊತ್ತಿನ ಊಟಕ್ಕೂ ದುಡಿಮೆಯನ್ನೇ ನಂಬಿ ಬದುಕುತ್ತಿದ್ದ ಅನೇಕ ಬಡವರು ಆಹಾರವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥವರನ್ನು ಕಂಡು ಮರುಗಿರುವ ಯುವ ಸಮೂಹವೊಂದು ನಗರದಲ್ಲಿ ಫುಡ್ ಕಿಟ್ ವಿತರಿಸಲು ಮುಂದಾಗಿದೆ.
ಹೊರಗೆ ಕೆಲಸವಿಲ್ಲ, ಮನೆಯಲ್ಲಿ ತಿನ್ನಲು ಧಾನ್ಯವಿಲ್ಲದ ಪರಿಸ್ಥಿತಿಯಲ್ಲಿರುವ ಬಡವರನ್ನು ಕಂಡಿರುವ ಯುವಕರು, ವಿವಿಧ ಸಾಮಗ್ರಿಗಳ ಕಿಟ್ಗಳನ್ನು ಹಂಚುತ್ತಿದ್ದಾರೆ. ಈ ಯುವಕರ ಕೆಲಸವನ್ನು ನೋಡಿ ಮೆಚ್ಚಿರುವ ಅನೇಕ ಅನಿವಾಸಿ ಭಾರತೀಯರು, ಈ ಕೆಲಸವನ್ನು ಹೀಗೆಯೇ ಮುಂದುವರೆಸುವಂತೆ ಬೆಂಬಲ ಸೂಚಿಸಿದ್ದು, ಅಭಿಯಾನಕ್ಕೆ ಬೇಕಾಗುವ ಆರ್ಥಿಕ ಸಹಾಯ ನೀಡಲು ನಿರ್ಧರಿಸಿದ್ದಾರೆ.