ಹುಬ್ಬಳ್ಳಿ :ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಇಂದು ಅಂತಿಮಗೊಳ್ಳಲಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಇಂದು ಪರಿಷತ್ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಅಂತಿಮ.. ಸಚಿವ ಜಗದೀಶ್ ಶೆಟ್ಟರ್ - ಹುಬ್ಬಳ್ಳಿ ಸುದ್ದಿ
ಬೇರೆ ಪಕ್ಷಗಳಂತೆ ನಮ್ಮ ಪಕ್ಷದಲ್ಲಿ ಎರಡು ಮೂರು ಅಭ್ಯರ್ಥಿ ಪಟ್ಟಿಯಿಲ್ಲ, ನಮ್ಮದು ಒಂದೇ ಆಯ್ಕೆ ಪಟ್ಟಿ. ಚರ್ಚೆಯಾಗಿ ಸರ್ವಾನುಮತದಿಂದ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಹೈ ಕಮಾಂಡ್ಗೆ ಕಳಿಸಿದೆ ಎಂದು ಶೆಟ್ಟರ್ ತಿಳಿಸಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಬೇರೆ ಪಕ್ಷಗಳಂತೆ ನಮ್ಮ ಪಕ್ಷದಲ್ಲಿ ಎರಡು ಮೂರು ಅಭ್ಯರ್ಥಿ ಪಟ್ಟಿಯಿಲ್ಲ, ನಮ್ಮದು ಒಂದೇ ಆಯ್ಕೆ ಪಟ್ಟಿ. ಚರ್ಚೆಯಾಗಿ ಸರ್ವಾನುಮತದಿಂದ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್ಗೆ ಕಳಿಸಿದೆ. ಇಂದು ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳ್ಳಲಿದೆ ಎಂದರು.
ಭಾರತದ ಗಡಿಯಲ್ಲಿ ಚೀನಾ ತಗಾದೆಗೆ ಪ್ರತಿಕ್ರಿಯೆ ನೀಡಿದ ಅವರು, ಚೀನಾ ಯಾವಾಗಲೂ ತನ್ನ ಕುತಂತ್ರ ಬುದ್ಧಿ ತೋರಿಸುತ್ತಿದೆ. ಇದು ಹೊಸದೇನಲ್ಲ, ಜವಾಹರಲಾಲ್ ನೆಹರು ಪ್ರಧಾನಮಂತ್ರಿ ಇದ್ದಾಗಲೂ ಕೂಡ ಈ ರೀತಿ ವರ್ತಿಸಿದ್ದಾರೆ. ನಂಬಿಕೆಗೆ ಅನರ್ಹವಾದ ದೇಶ ಯಾವುದೆಂದರೆ ಅದು ಚೀನಾ ಎಂದು ಕಿಡಿ ಕಾರಿದರು.