ಧಾರವಾಡ: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಇಂದಿನಿಂದ ಜೂ. 7ರವರೆಗೆ ಕಠಿಣ ಲಾಕ್‌ಡೌನ್ ಜಾರಿಯಲ್ಲಿರಲಿದೆ. ಈ ಹಿನ್ನೆಲೆಯಲ್ಲಿ ಪ್ರತಿನಿತ್ಯ ಬೆಳಗ್ಗೆ 6 ರಿಂದ 8 ಗಂಟೆವರೆಗೆ ತರಕಾರಿ, ಹಾಲು, ಹಣ್ಣು ಖರೀದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಮದ್ಯ ಮಾರಾಟ ಹಾಗೂ ಹೋಟೆಲ್ ಪಾರ್ಸೆಲ್ ಸೇವೆ ಬಂದ್ ಮಾಡಿ ಜಿಲ್ಲಾಡಳಿತ ಆದೇಶಿಸಿದೆ.
ಧಾರವಾಡದಲ್ಲಿ ಜೂ.7ರವರೆಗೆ ಮದ್ಯ, ಹೋಟೆಲ್ ಪಾರ್ಸೆಲ್ ಸೇವೆ ಬಂದ್ - ಜೂ. 7ರವರೆಗೆ ಮದ್ಯ ಮಾರಾಟ ನಿಶೇಧ
ಇಂದಿನಿಂದ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಲಾಕ್‌ಡೌನ್ ಹೇರಿದ್ದರಿಂದ ಬೆಳಗ್ಗೆ ತರಕಾರಿ ಸೇರಿದಂತೆ ಮತ್ತಿತರ ಸಾಮಗ್ರಿ ಖರೀದಿಗೆ ಜನರು ಮಾರುಕಟ್ಟೆಗೆ ಬಂದಿದ್ದರು. ಸಾಮಾಜಿಕ ಅಂತರ, ಮುಖಕ್ಕೆ ಮಾಸ್ಕ್ ಧರಿಸಿ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದುದು ಕಂಡುಬಂತು.
ಅಗತ್ಯ ವಸ್ತುಗಳ ಖರೀದಿಗೆ ಆಗಮಿಸಿದ ಜನತೆ
ಇಂದಿನಿಂದ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಲಾಕ್‌ಡೌನ್ ಹೇರಿದ್ದರಿಂದ ಬೆಳಗ್ಗೆ ತರಕಾರಿ ಸೇರಿದಂತೆ ಮತ್ತಿತರ ಸಾಮಗ್ರಿ ಖರೀದಿಗೆ ಜನರು ಮಾರುಕಟ್ಟೆಗೆ ಬಂದಿದ್ದರು. ಸಾಮಾಜಿಕ ಅಂತರ, ಮುಖಕ್ಕೆ ಮಾಸ್ಕ್ ಧರಿಸಿ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದುದು ಕಂಡುಬಂತು.
ಗುರುವಾರ ಮತ್ತು ಶುಕ್ರವಾರ ಮಾತ್ರ ಕಿರಾಣಿ, ಮಾಂಸ ಮಾರಾಟಕ್ಕೆ ಅವಕಾಶವಿದೆ. ವಾರದ ಎರಡು ದಿನ ಮಾತ್ರ ಬೆಳಗ್ಗೆ 10 ರವರೆಗೆ ಅವಕಾಶ ಒದಗಿಸಲಾಗಿದೆ.