ಹುಬ್ಬಳ್ಳಿ:ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮ ಪಂಚಾಯಿತಿಯ 14ನೇಯ ಹಣಕಾಸು ಯೋಜನೆಯಲ್ಲಿ ಅವ್ಯವಹಾರವಾಗಿದೆ ಎಂದು ಗ್ರಾಮದ ಮುಖಂಡ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಲಿಂಗರಡ್ಡಿ ನಡುವಿನಮನಿ ಧಾರವಾಡದ ಭ್ರಷ್ಟಾಚಾರ ನಿಗ್ರಹದಳಕ್ಕೆ ದೂರು ನೀಡಿದ್ದಾರೆ.
ಗ್ರಾ.ಪಂ.ನಲ್ಲಿ 30 ಲಕ್ಷ ರೂಪಾಯಿ ಅವ್ಯವಹಾರ ಆರೋಪ: ಎಸಿಬಿಗೆ ದೂರು ನೀಡಿದ ಕೈ ಮುಖಂಡ - Irregularity in financial planning
ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮ ಪಂಚಾಯಿತಿಯ ಹದಿನಾಲ್ಕನೆಯ ಹಣಕಾಸು ಯೋಜನೆಯಲ್ಲಿ ಅವ್ಯವಹಾರವಾಗಿದೆ ಎಂದು ಗ್ರಾಮದ ಮುಖಂಡ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಲಿಂಗರಡ್ಡಿ ನಡುವಿನಮನಿ ಧಾರವಾಡದ ಭ್ರಷ್ಟಾಚಾರ ನಿಗ್ರಹದಳಕ್ಕೆ ದೂರು ನೀಡಿದ್ದಾರೆ.
ಲಿಂಗರಡ್ಡಿ ನಡುವಿನಮನಿ
ಗ್ರಾಮ ಪಂಚಾಯಿತಿಯ 14ನೇ ಹಣಕಾಸು ಯೋಜನೆಗೆ ಅಂದಾಜು ಪತ್ರಿಕೆ ಹೊಂದಾಣಿಕೆ ಇಲ್ಲದೆ ಕೊಟ್ಟಿ ಬಿಲ್, ಕೊಟ್ಟಿ ಫೋಟೋ ಹಚ್ಚಿ ಸರ್ಕಾರದ 30 ಲಕ್ಷ ರೂಪಾಯಿಗಿಂತ ಹೆಚ್ಚಿಗೆ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ. ತಪ್ಪಿತಸ್ಥರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಡುವಿನಮನಿ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಜೂನ್ 9 ರಂದು ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಳಿಗೆ ಅವ್ಯವಹಾರದ ಕುರಿತು ಗ್ರಾಮಸ್ಥರು ಸಹ ದೂರು ನೀಡಿದ್ದು, ಕೂಡಲೇ ಅಧಿಕಾರಿಗಳು ತನಿಖೆ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.