ಹುಬ್ಬಳ್ಳಿ:ಕನಕಗಿರಿ ಬಿಜೆಪಿ ಶಾಸಕ ಬಸವರಾಜ ದಡೆಸುಗೂರು ಅವರು ಮಹಿಳಾ ಅಧಿಕಾರಿ ಜೊತೆಗೆ ಮಾತನಾಡಿದ್ದಾರೆ ಎಂದು ಹೇಳಲಾಗ್ತಿರುವ ಫೋನ್ ಆಡಿಯೋ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಶಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಹೇಳಿದ್ದಾರೆ.
ಮಹಿಳೆ ಜೊತೆಗಿನ ಆಡಿಯೋ ವೈರಲ್.. ಶಾಸಕನ ಕುರಿತು ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಏನಂತಾರೆ? - ಕನಕಗಿರಿ ಸಿಡಿಪಿಒ ಮಹಿಳಾ ಅಧಿಕಾರಿ ಜೊತೆ ಫೋನ್ ಆಡಿಯೋ ವಿವಾದ
ಮಹಿಳೆಯೊಂದಿಗೆ ತಮ್ಮದೇ ಪಕ್ಷದ ಶಾಸಕ ನಡೆಸಿದ್ದಾರೆ ಎನ್ನಲಾದ ಅಸಭ್ಯ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ. ಈ ಕುರಿತು ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ಈ ರೀತಿ ಶಾಸಕರು ಮಹಿಳೆ ಜೊತೆಗೆ ವರ್ತಿಸಬಾರದಿತ್ತು ಎಂದಿದ್ದಾರೆ.
ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ರೀತಿ ಶಾಸಕರು ಮಹಿಳೆ ಜೊತೆಗೆ ಕೆಟ್ಟದಾಗಿ ವರ್ತಿಸಬಾರದಾಗಿತ್ತು. ಆದರೆ, ಇದೀಗ ಘಟನೆ ನಡೆದು ಹೋಗಿದೆ. ಹಾಗಾಗಿ, ಈ ಬಗ್ಗೆ ನಮ್ಮ ವರಿಷ್ಠರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.