ಹುಬ್ಬಳ್ಳಿ :ಪೋಷಕರ ವಿರೋಧದ ನಡುವೆಯೂ ಮದುವೆಯಾದಪ್ರೇಮಿಗಳಿಬ್ಬರು ಪ್ರಾಣ ಬೆದರಿಕೆ ಎದುರಿಸುತ್ತಿದ್ದಾರೆ.
ಯುವತಿ ಪೋಷಕರ ವಿರೋಧದ ನಡುವೆಯೂ ಮದುವೆಯಾಗಿರುವ ಪ್ರೇಮಿಗಳು, ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ. ಮಂಜುನಾಥ ಹಾಗೂ ಶಾಂತವ್ವ ಎಂಬ ಪ್ರೇಮಿಗಳು ಪೋಷಕರ ವಿರೋಧದ ನಡುವೆ ಮದುವೆಯಾಗಿರುವ ಜೋಡಿ.
ಪ್ರಿಯಕರ ಮಂಜುನಾಥ ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ನಿವಾಸಿಯಾಗಿದ್ದಾರೆ. ಅವರ ಪತ್ನಿ ಶಾಂತವ್ವ ಅವರು ಕುಂದಗೋಳ ತಾಲೂಕಿನ ಕುಬಿಹಾಳದ ನಿವಾಸಿಯಾಗಿದ್ದಾರೆ. ಶಾಂತವ್ವ ನೂಲ್ವಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುವಾಗ ಮಂಜುನಾಥರ ಪರಿಚಯವಾಗಿದೆ.
ಈ ಪರಿಚಯ ಆರಂಭದಲ್ಲಿ ಸ್ನೇಹವಾಗಿದ್ದು, ಕೊನೆಗೆ ಇಬ್ಬರ ನಡುವೆ ಪ್ರೀತಿ ಬೆಳೆದಿದೆ. ಕಳೆದ ಎರಡು ವರ್ಷದಿಂದ ಇಬ್ಬರೂ ಪರಸ್ಪರ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು.
ಇವರು ಕಳೆದ ವರ್ಷ ಸೆಪ್ಟೆಂಬರ್ 24ರಂದು ಮದುವೆಯಾಗಿ ಮನೆಯವರಿಗೆ ಗೊತ್ತಾಗದ ಹಾಗೇ ಅವರಿವರ ಮನೆಯಲ್ಲಿದ್ದರು. ಆದರೆ, ಇದೀಗ ಇವರಿಬ್ಬರ ಪ್ರೀತಿ ವಿಚಾರ ಎರಡು ಕಡೆ ಪೋಷಕರಿಗೂ ಗೊತ್ತಾಗಿದೆ. ಆದ್ರೆ, ಇಬ್ಬರ ಜಾತಿ ಬೇರೆ-ಬೇರೆಯಾಗಿದ್ದರಿಂದ ಯುವತಿಯ ಪೋಷಕರು ಪ್ರೀತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.