ಧಾರವಾಡ:ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ಗೆ ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆ ಕರೆ ಬಂದಿದೆಯಂತೆ. ಈ ಸಂಬಂಧ ಅವರು ದೂರನ್ನು ಸಹ ನೀಡಿದ್ದಾರೆ. ಅಷ್ಟೇ ಅಲ್ಲದೇ ವಾಟ್ಸ್ಆ್ಯಪ್ನಲ್ಲಿ ಅವಾಚ್ಯ ಶಬ್ದಗಳಿಂದ ಅಪರಿಚಿತ ವ್ಯಕ್ತಿ ನಿಂದನೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ 5 ವಾಯ್ಸ್ ಸಂದೇಶಗಳಲ್ಲಿ ಅಶ್ಲೀಲ ಪದಗಳನ್ನು ಬಳಕೆ ಮಾಡಿ ನಿಂದನೆ ಮಾಡಲಾಗಿದೆಯಂತೆ. ನಿನ್ನ ಪಾಡಿಗೆ ನೀನಿರು, ನಮ್ಮ ತಂಟೆಗೆ ಬರಬೇಡ ಎಂದು ಮುತಾಲಿಕ್ ಅವರಿಗೆ ವ್ಯಕ್ತಿ ಬೆದರಿಕೆ ಹಾಕಿದ್ದಾನೆ ಎನ್ನಲಾಗ್ತಿದೆ.
ಈ ಹಿಂದೆ ಮಸಿ ಬಳಸಿಕೊಂಡಿರುವೆ, ಇನ್ನು ಮುಂದಾದರೂ ಸಮುದಾಯದ ಬಗ್ಗೆ ಮಾತನಾಡಬೇಡ. ನಮ್ಮ ಸಮುದಾಯದ ವಿರುದ್ಧ ಮಾತನಾಡೋಕೆ ನೀನ್ಯಾರು ಎಂದು ಪ್ರಶ್ನಿಸಿದ್ದಾನಂತೆ. 8277476700 ನಂಬರ್ನಿಂದ ಅಶ್ಲೀಲ ಪದಗಳ ಮೂಲಕ ವ್ಯಕ್ತಿ ನಿಂದನೆ ಮಾಡಿದ್ದಾನೆ ಎಂದು ಮುತಾಲಿಕ್ ಆರೋಪಿಸಿದ್ದಾರೆ.
ಈ ಕುರಿತು ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಆಗಮಿಸಿದ ಪ್ರಮೋದ್ ಮುತಾಲಿಕ್ ದೂರು ದಾಖಲಿಸಿದ್ದಾರೆ. ಬೆದರಿಕೆ ಸಂದೇಶ ಕಳುಹಿಸಿರುವ ವ್ಯಕ್ತಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಲವ್ ಜಿಹಾದ್ ನಿಯಂತ್ರಣಕ್ಕೆ ಪ್ರತ್ಯೇಕ ಕಾಯ್ದೆ ರೂಪಿಸಬೇಕು: ಪ್ರಮೋದ್ ಮುತಾಲಿಕ್ ಆಗ್ರಹ