ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ನೈರುತ್ಯ ರೈಲ್ವೆಯಿಂದ ಕೊರೊನಾ ವಾರಿಯರ್ಸ್​ಗೆ ಜೀವ ರಕ್ಷಕ ಸಾಧನಗಳು ಸಿದ್ದ - ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯ

ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೈಲ್ವೆ ಪಿಪಿಇ (ವೈಯಕ್ತಿಕ ರಕ್ಷಣಾ ಸಾಧನ) ತಯಾರಿಸಲು ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯ ಪ್ರಾರಂಭಿಸಿದೆ.

Life-saving devices are available from Hubli's Southwest Railway Zone to Corona Warriors
ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯದಿಂದ ಕೊರೊನಾ ವಾರಿಯರ್ಸ್​ಗೆ ಜೀವ ರಕ್ಷಕ ಸಾಧನಗಳು ಸಿದ್ದ

By

Published : Apr 29, 2020, 1:57 PM IST

ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯ ಕೊರೊನಾ ವೈರಾಸ್​​​ ವಿರುದ್ಧದ ಹೋರಾಟಕ್ಕೆ ತಮ್ಮದೆಯಾದ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತಾ ಬಂದಿದೆ. ಈ ಮೂಲಕ ಕೊರೊನಾ ವಾರಿಯರ್ಸ್ ಗಳಿಗೆ ಜೀವ ರಕ್ಷಕ ಸಾಧನಗಳು ಹಾಗೂ ಉಪಕರಣಗಳನ್ನು ಸಿದ್ದಪಡಿಸುವ ಕೆಲಸ ಮಾಡುತ್ತಿದೆ.

ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ಅನುಕೂಲವಾಗುವ ನಿಟ್ಟಿನಲ್ಲೂ ರೈಲ್ವೆ ಪಿಪಿಇ (ವೈಯಕ್ತಿಕ ರಕ್ಷಣಾ ಸಾಧನ) ತಯಾರಿಸಲು ಪ್ರಾರಂಭಿಸಿದೆ.

ಕೊರೊನಾ ವಾರಿಯರ್ಸ್​

ಉತ್ತಮ ಗುಣಮಟ್ಟದ ಪಿಪಿಇ ಉಪಕರಣಗಳ ತಯಾರಿಕೆಯನ್ನು ಪ್ರಾರಂಭಿಸಿದೆ. ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿನ ಎಸ್‌ಡಬ್ಲ್ಯುಆರ್ ಕಾರ್ಯಾಗಾರಗಳು ಉತ್ತಮ ಗುಣಮಟ್ಟದ ಪಿಪಿಇ ಸೂಟ್‌ಗಳನ್ನು ಯಶಸ್ವಿಯಾಗಿ ಪುನರಾವರ್ತಿಸಿವೆ. ಇಲ್ಲಿಯವರೆಗೆ ಎಸ್‌ಡಬ್ಲ್ಯುಆರ್‌ನ ಹುಬ್ಬಳ್ಳಿ ಕಾರ್ಯಾಗಾರವು 450 ಕವರಲ್‌ಗಳನ್ನು ತಯಾರಿಸಿದೆ ಮತ್ತು ಸ್ಥಾಪಿತ ಮಾನದಂಡಗಳ ಪ್ರಕಾರ ಮೈಸೂರು ಕಾರ್ಯಾಗಾರವು 200 ಕವರಲ್‌ಗಳನ್ನು ಪಿಪಿಇ ಸೂಟ್‌ಗಳನ್ನು ಕಟ್ಟುನಿಟ್ಟಾದ ಗುಣಮಟ್ಟದಲ್ಲಿ ತಯಾರಿಸಿದೆ.

ಈ ಕವರಲ್‌ಗಳನ್ನು ತಯಾರಿಸಲು 20 ಸಿಬ್ಬಂದಿ, ಹುಬ್ಬಳ್ಳಿ ಕಾರ್ಯಾಗಾರದಿಂದ 12 ಮತ್ತು ಮೈಸೂರು ಕಾರ್ಯಾಗಾರದಿಂದ 8 ಮಂದಿಗೆ ವಿಡಿಯೋಗಳ ಮೂಲಕ ತರಬೇತಿ ನೀಡಲಾಗಿದೆ.

ಉತ್ಪಾದನೆಗಳನ್ನು ಮತ್ತಷ್ಟು ಹೆಚ್ಚಿಸಲು ಎರಡೂ ಕಾರ್ಯಾಗಾರಗಳು ಏಪ್ರಿಲ್ ಅಂತ್ಯದ ವೇಳೆಗೆ ಒಟ್ಟು 900 ಕವರಲ್‌ಗಳನ್ನು ಮತ್ತು 2020 ರ ಮೇ ಅಂತ್ಯದ ವೇಳೆಗೆ 3,900 ತಯಾರಿಸುವ ಯೋಜನೆ ಇಟ್ಟುಕೊಂಡಿದೆ.

ಪಿಪಿಇ ಮಾದರಿಗಳನ್ನು ಪರೀಕ್ಷಿಸುವ ಭಾರತದ ಏಕೈಕ ಸಂಶೋಧನಾ ಸಂಸ್ಥೆಯಾದ ಕೊಯಮತ್ತೂರು ಮೂಲದ ದಕ್ಷಿಣ ಭಾರತ ಜವಳಿ ಸಂಸ್ಥೆ ಅನುಮೋದಿಸಿದ ವಿಶೇಷ ಬಟ್ಟೆಯೊಂದಿಗೆ ಈ ಸೂಟ್ ತಯಾರಿಸಲಾಗಿದೆ.

ABOUT THE AUTHOR

...view details