ಹುಬ್ಬಳ್ಳಿ :ಭಗತ್ ಸಿಂಗ್ ಅಭಿಮಾನಿಯೊಬ್ಬರು ತಮ್ಮ ಜನ್ಮ ದಿನದ ಪ್ರಯುಕ್ತ ಪ್ರಧಾನಮಂತ್ರಿಗೆ ರಕ್ತದ ಮೂಲಕ ಪತ್ರ ಬರೆಯುವ ಮೂಲಕ ಒಂದು ಮನವಿ ಮಾಡಿದ್ದಾರೆ. ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಹೊಸೂರಿನ ಗಾಳಿ ದುರ್ಗಮ್ಮ ದೇವಿಯ ದೇವಸ್ಥಾನದ ಹತ್ತಿರದಲ್ಲಿರುವ ಜಾಗದಲ್ಲಿ ಭಗತಸಿಂಗ್ ಅವರ ಪುತ್ಥಳಿಯನ್ನು ನಿರ್ಮಾಣ ಮಾಡಬೇಕು ಎಂದು ಭಗತ್ ಸಿಂಗ್ ಅಭಿಮಾನಿ ಶ್ರೀಧರಸಿಂಗ ಸಾಂಗ್ಲಿಕರ್ ಒತ್ತಾಯಿಸಿದ್ದಾರೆ.
ಭಗತಸಿಂಗ್ ಪ್ರತಿಮೆ ನಿರ್ಮಿಸಲು ಅಭಿಮಾನಿಯಿಂದ ಪ್ರಧಾನಿ ಮೋದಿಗೆ ನೆತ್ತರಲ್ಲಿ ಪತ್ರ - Letter to PM Modi to build Bhagat Singh statue
ಭಗತ್ ಸಿಂಗ್ ಅಭಿಮಾನಿಯೊಬ್ಬರು ತಮ್ಮ ಜನ್ಮದಿನದ ಪ್ರಯುಕ್ತ ಪ್ರಧಾನಿಗೆ ನೆತ್ತರಲ್ಲಿ ಪತ್ರ ಬರೆದು ಹುಬ್ಬಳ್ಳಿಯಲ್ಲಿ ಭಗತ್ ಸಿಂಗ್ ಪ್ರತಿಮೆ ನಿರ್ಮಿಸುವಂತೆ ಮನವಿ ಮಾಡಿದ್ದಾರೆ..
ಭಗತಸಿಂಗ್ ಪ್ರತಿಮೆ ನಿರ್ಮಿಸಲು ಅಭಿಮಾನಿಯಿಂದ ಪ್ರಧಾನಿ ಮೋದಿಗೆ ನೆತ್ತರಲ್ಲಿ ಪತ್ರ
ರಕ್ತದಲ್ಲಿ ಪತ್ರ ಬರೆದ ಭಗತಸಿಂಗ್ ಯುವಕ ಮಂಡಳದ ಅಧ್ಯಕ್ಷ ಶ್ರೀಧರ ಸಾಂಗ್ಲಿಕರ್, ಭಗತಸಿಂಗ್ ಅವರ ಮೇಲಿನ ಅಪಾರ ಅಭಿಮಾನದಿಂದ ಈ ಕಾರ್ಯ ಕೈಗೊಂಡಿರುವುದಾಗಿ ಹೇಳಿದ್ದಾರೆ. ಜೊತೆಗೆ ಮುಂಬರುವ ಪೀಳಿಗೆಗೆ ಭಗತಸಿಂಗ್ ಅವರ ಆದರ್ಶಗಳನ್ನು ಪರಿಚಯಿಸುವ ಸದುದ್ದೇಶದಿಂದ ಪ್ರಧಾನಿ ಮೋದಿಗೆ ಪತ್ರ ಬರೆದಿರುವುದಾಗಿ ಹೇಳಿದ್ದಾರೆ.
ಓದಿ :ಕುಮಟಾ : ಮಿಲನ ಕ್ರಿಯೆಯಲ್ಲಿ ತೊಡಗಲು ಆಗಮಿಸಿದ ಮೂರು ಕಾಳಿಂಗ ಸರ್ಪಗಳ ರಕ್ಷಣೆ