ಹುಬ್ಬಳ್ಳಿ: ಅಯೋಧ್ಯೆ ರಾಮಮಂದಿರದಲ್ಲಿ ಶಿವನಿಗೂ ಸ್ಥಾನ ಸಿಗಬೇಕು ಎಂದು ಆಗ್ರಹಿಸಿ ಹುಬ್ಬಳ್ಳಿಯ ಶ್ರೀಮಧ್ವೇಶ್ವರ ಶೈವ ಸದ್ಭೋಧನಾ ಸಂಸ್ಥೆ ವತಿಯಿಂದ ಪತ್ರ ಚಳವಳಿ ನಡೆಸಲಾಯಿತು.
ಅಯೋಧ್ಯೆಯಲ್ಲಿ ಶಿವನಿಗೂ ಸ್ಥಾನ ನೀಡುವಂತೆ ಆಗ್ರಹಿಸಿ ಪತ್ರ ಚಳವಳಿ - ಶ್ರೀಶೈಲ ಮಠದ ಪತ್ರ ಚಳುವಳಿ ನ್ಯೂಸ್
ಅಯೋಧ್ಯೆಯ ರಾಮಮಂದಿರದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸುವಂತೆ ಒತ್ತಾಯಿಸಿ ಬಂಕಾಪುರ್ ಚೌಕ್ ಬಳಿಯ ಶ್ರೀಶೈಲ ಮಠದಲ್ಲಿ ಪತ್ರ ಚಳವಳಿ ನಡೆಸಲಾಯಿತು.
ರಾಮ ಮಂದಿರ ನಿರ್ಮಾಣದ ಹಿನ್ನೆಲೆಯಲ್ಲಿ ಉತ್ಖನನ ಮಾಡುವಾಗ 5 ಅಡಿ ಎತ್ತರದ ಶಿವಲಿಂಗ ಪತ್ತೆ ಆಗಿದ್ದು, ಅಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸುವಂತೆ ಟ್ರಸ್ಟ್ ಗೆ ಮನವಿ ಮಾಡಿ, ಸಂಸದ ಪ್ರಹ್ಲಾದ್ ಜೋಶಿ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಬಂಕಾಪುರ್ ಚೌಕ್ ಬಳಿಯ ಶ್ರೀಶೈಲ ಮಠದಲ್ಲಿ ಪತ್ರ ಚಳವಳಿ ನಡೆಸಲಾಗಿದ್ದು, ರಾಮನ ಜೊತೆಯಲ್ಲಿಯೇ ಶಿವನಿಗೂ ಅಲ್ಲಿ ಸ್ಥಾನ ಕಲ್ಪಿಸಿ ಎಂದು ಪತ್ರದಲ್ಲಿ ಬರೆಯಲಾಗಿದೆ. ರಾಮನಿಂದಲೇ ರಾಮೇಶ್ವರ ನಿರ್ಮಾಣವಾಗಿದ್ದು, ರಾಮನ ಜನ್ಮಸ್ಥಳ ಎನ್ನುವ ಜಾಗದಲ್ಲೇ ಶಿವಲಿಂಗ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಶಿವನಿಗೂ ಪೂಜ್ಯನೀಯ ಸ್ಥಾನ ಕಲ್ಪಿಸಿ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.