ಧಾರವಾಡ: ತಾಲೂಕಿನ ಬೆನಕನಕಟ್ಟಿ ಗ್ರಾಮದಲ್ಲಿ ಚಿರತೆ ಹಾದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಚಿರತೆ ಓಡಾಡಿದ ಹೆಜ್ಜೆಗಳನ್ನು ನೋಡಿ ಜನರಲ್ಲಿ ಆತಂಕ ವ್ಯಕ್ತವಾಗಿದ್ದು, ಗ್ರಾಮಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆನಕನಕಟ್ಟಿ ಗ್ರಾಮದಲ್ಲಿ ಚಿರತೆ ಹಾದು ಹೋಗಿರುವ ಶಂಕೆ: ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು - Leopard
ಬೆನಕನಕಟ್ಟಿ ಮಾರ್ಗದಲ್ಲಿ ಹಾದು ಚಿರತೆ ಬೇರೆಡೆ ಹೋಗಿರುವ ಸಾಧ್ಯತೆಯಿದೆ. ಹೆಜ್ಜೆ ಜಾಡುಗಳನ್ನು ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಹುಡುಕಾಡಿದ್ದಾರೆ. ರಾತ್ರಿಯಿಡೀ ಹುಡುಕಿದರೂ ಚಿರತೆ ಸುಳಿವು ಸಿಕ್ಕಿಲ್ಲ. ಈ ಹಿನ್ನೆಲೆ ಜಾಗರೂಕರಾಗಿರಲು ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ.
ಗ್ರಾಮದ ಜಮೀನಿನಲ್ಲಿ ರಾತ್ರಿ ಚಿರತೆ ಓಡಾಡಿದೆ ಎನ್ನಲಾಗಿದೆ. ರಾತ್ರಿ ಹೊತ್ತು ಬೆನಕನಕಟ್ಟಿ ಮಾರ್ಗದಲ್ಲಿ ಹಾದು ಚಿರತೆ ಬೇರೆಡೆ ಹೋಗಿರುವ ಸಾಧ್ಯತೆಯಿದೆ. ಹೆಜ್ಜೆ ಜಾಡುಗಳನ್ನು ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಹುಡುಕಾಡಿದ್ದಾರೆ. ರಾತ್ರಿಯಿಡೀ ಹುಡುಕಿದರೂ ಚಿರತೆ ಸುಳಿವು ಸಿಕ್ಕಿಲ್ಲ. ಗ್ರಾಮದ ಬಳಿ ಬಂದು ಚಿರತೆ ಪುನಃ ಅರಣ್ಯ ಸೇರಿರಬಹುದು. ಚಿರತೆ ಓಡಾಡಿದ ಹಿನ್ನೆಲೆ ಜಾಗರೂಕರಾಗಿರಲು ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ.
ಅಕ್ಕಪಕ್ಕದ ಗ್ರಾಮದ ಸುತ್ತಮುತ್ತಲೂ ಅರಣ್ಯ ಪ್ರದೇಶ ಇರುವುದರಿಂದ ಚಿರತೆ ಹಾದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಗ್ರಾಮದ ಇಟ್ಟಂಗಿ ಭಟ್ಟಿಯಲ್ಲಿನ ಇಟ್ಟಂಗಿಗಳಲ್ಲಿ ಚಿರತೆ ಹೆಜ್ಜೆ ಮೂಡಿವೆ. ಆ ಹೆಜ್ಜೆ ನೋಡಿದ ಜನರು ಆತಂಕಗೊಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.