ಧಾರವಾಡ: ಕಳೆದ ಮೂರು ದಿನಗಳಿಂದ ತಾಲೂಕಿನ ಕವಲಗೇರಿ ಗ್ರಾಮದಲ್ಲಿ ಚಿರತೆ ಸೆರೆ ಹಿಡಿಯಲು ಹಗಲು ರಾತ್ರಿಯೆನ್ನದೇ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಚಿರತೆ ಬಲೆಗೆ ಬೀಳದೆ ಕಣ್ಣಾಮುಚ್ಚಾಲೆ ಆಟ ನಡೆಸಿದೆ.
ಚಿರತೆ ಕಣ್ಣಾಮುಚ್ಚಾಲೆ:ಅರಣ್ಯ ಇಲಾಖೆ ಚಿಂತೆಗೆ ದೂಡಿದ ಚಿರತೆ - Dharwad news
ಚಿರತೆ ಗೋವನಕೊಪ್ಪ ಗ್ರಾಮಕ್ಕೆ ಹೋಗಿದೆ ಎನ್ನುವ ಮಾಹಿತಿ ಕೂಡ ಅಧಿಕಾರಿಗಳಿಂದ ಬಂದಿದೆ. ಅಲ್ಲದೇ ಗ್ರಾಮಸ್ಥರ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಕಂದಾಯ ನಿರೀಕ್ಷಕರು ಮತ್ತು ಗ್ರಾಮಲೆಕ್ಕಾಧಿಕಾರಿ ಸ್ಥಳದಲ್ಲಿ ಹಾಜರಿದ್ದು ಮತ್ತೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಅರಣ್ಯ ಇಲಾಖೆಯನ್ನ ಚಿಂತೆಗೆ ದೂಡಿದ ಚಿರತೆ
ಕಳೆದ ರಾತ್ರಿ ಕವಲಗೇರಿ ಗ್ರಾಮದಲ್ಲಿ ಚಿರತೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ಆದರೆ ಚಿರತೆ ಅಲ್ಲಿಂದ ಗೋಪನಕೊಪ್ಪದತ್ತ ಹೋಗಿದೆ. ಚಿರತೆ ಗೋವನಕೊಪ್ಪ ಮಾವಿನ ತೋಟಕ್ಕೆ, ಕಬ್ಬಿನ ಗದ್ದೆಯಲ್ಲಿ ಬಂದಿದೆ ಎನ್ನುವ ಮಾಹಿತಿ ಬೆನ್ನಲ್ಲೇ ಮತ್ತೆ ಅಧಿಕಾರಗಳು ಗೋಪನಕೊಪ್ಪಕ್ಕೆ ತೆರಳಿದ್ದರು.
ಚಿರತೆ ಗೋವನಕೊಪ್ಪ ಗ್ರಾಮಕ್ಕೆ ಹೋಗಿದೆ ಎನ್ನುವ ಮಾಹಿತಿ ಕೂಡ ಅಧಿಕಾರಿಗಳಿಂದ ಬಂದಿದೆ. ಅಲ್ಲದೆ ಗ್ರಾಮಸ್ಥರ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಕಂದಾಯ ನಿರೀಕ್ಷಕರು ಮತ್ತು ಗ್ರಾಮಲೆಕ್ಕಾಧಿಕಾರಿ ಸ್ಥಳದಲ್ಲಿ ಹಾಜರಿದ್ದು, ಮತ್ತೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.
Last Updated : Sep 24, 2021, 1:13 PM IST